ಜೆರುಸಲೇಂ: ಫ್ಲೈದುಬೈ (Flydubai) ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಒಮಾನಿ ಸಹ-ಪೈಲಟ್ ಆತ್ಮಾಹುತಿ ಪ್ರವೃತ್ತಿ ಮತ್ತು ತೀವ್ರಗಾಮಿ ಚಿಂತನೆಗೆ ಒಳಗಾಗಿದ್ದ. ದಾಳಿ ಬಳಿಕ ‘ನನ್ನನ್ನು ಕೊಂದುಬಿಡಿ.. ನನ್ನನ್ನು ಕೊಂದುಬಿಡಿ’ ಎಂದು ಸಹ-ಪೈಲಟ್ ಕೂಗಾಡಿದ್ದಾನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ತಿಳಿಸಿದ್ದಾರೆ.
ವಿಮಾನದ ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿದ್ದ ಎಂಬುದು ನಮಗೆ ತಿಳಿದಿದೆ. ಈ ವಿಚಾರ ಆತನಿಂದಲೇ ತಿಳಿದುಬಂದಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ದಾಳಿಯ ಹಿಂದೆ ಇರಾನ್ ಕೈವಾಡ ಇರಬಹುದು: ಟ್ರಂಪ್
ಕೃತ್ಯದ ಬಳಿಕ ಸಿಲುಕೊಂಡಾಗ ಸಹ-ಪೈಲಟ್, ನನ್ನನ್ನು ಕೊಂದುಬಿಡಿ.. ನನ್ನನ್ನು ಕೊಂದುಬಿಡಿ ಅಂತ ಕೂಗಾಡಿದ್ದ. ಅಲ್ಲದೇ, ಆತ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ. ಈ ಬಗ್ಗೆ ಯಾವುದೇ ಸಂಶಯವಿಲ್ಲ. ಆತ ವಿಮಾನವನ್ನು ಕೆಳಗೆ ಬೀಳಿಸುವ ಉದ್ದೇಶ ಹೊಂದಿದ್ದ ಸಾಧ್ಯತೆಯೂ ಇದೆ ಎಂದು ನೆತನ್ಯಾಹು ಶಂಕೆ ವ್ಯಕ್ತಪಡಿಸಿದ್ದಾರೆ.
ಅವನ ಹಿನ್ನೆಲೆಯಲ್ಲಿ ಕಂಡುಬರುವ ಇಸ್ಲಾಮಿಸ್ಟ್ ಒಲವು ಕುರಿತು ನಾನು ಈಗಷ್ಟೇ ಹೇಳಿದ ವಿಷಯಗಳೊಂದಿಗೆ ಇದನ್ನು ಸೇರಿಸಿ ನೋಡಿದರೆ, ನಮಗೆ ಉತ್ತಮ ಸುಳಿವು ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ನಾನು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದಾಗ್ಯೂ, ಸದ್ಯಕ್ಕೆ ನಮ್ಮ ಬಳಿ ಇರುವ ಸೂಚನೆಗಳು ಇವೇ ಆಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೈಜಾಕ್ ಆತಂಕ ಮೆಟ್ಟಿ ನಿಂತ `ಹೀರೋ’ – ಭಾರತೀಯ ಪೈಲಟ್ ಸ್ಮಿತ್ ಶ್ಲಾಘಿಸಿದ ಮೋದಿ
ಭಾರತೀಯ ಪ್ರಜೆಯಾದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಸಹ-ಪೈಲಟ್ ಚಾಕುವಿನಿಂದ ಇರಿದಿದ್ದಾನೆ. ಹಲ್ಲೆಗೊಳಗಾದ ಕ್ಯಾಪ್ಟನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

