-ಪದಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಭಾರತ
-ಹುಟ್ಟುಹಬ್ಬದ ದಿನವೇ ಚಿನ್ನದ ಗಿಫ್ಟ್
ನಗೋಯಾ: ಮಹಿಳೆಯರ 75 ಕೆಜಿ ಬಾಕ್ಸಿಂಗ್ (Boxing) ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಲವ್ಲಿನಾ ಬೊರ್ಗೊಹೈನ್ (Lovlina Borgohain) ಭಾರತಕ್ಕೆ (India) ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ
ಏಷ್ಯನ್ ಗೇಮ್ಸ್‌ನ ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದ ಫೈನಲ್‌ನಲ್ಲಿ ಚೀನಾದ ಬಾಲ್ ಝಿಯಾ ವಿರುದ್ಧ ಭಾರತದ ಲವ್ಲಿನಾ ಬೊರ್ಗೊಹೈನ್ ಅತ್ಯುತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ತಮ್ಮದಾಗಿಸಿಕೊಂಡಿದೆ. ಈ ಮೂಲಕ ಭಾರತಕ್ಕೆ 12 ಚಿನ್ನದ ಪದಕ ಬಂದಿವೆ. ಇದನ್ನೂ ಓದಿ: Asian Games | ಮಹಿಳಾ ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ
ಮೊದಲ ರೌಂಡ್‌ನಲ್ಲಿ ಚೀನಾದ ಬಾಲ್ ಝಿಯಾ ಮುನ್ನಡೆ ಸಾಧಿಸಿದರೂ ಕೂಡ ಲವ್ಲಿನಾ ಎಚ್ಚರಿಕೆಯಿಂದ ಪ್ರತಿದಾಳಿ ನಡೆಸಿದರು. ಆದರೆ ಛಲ ಬಿಡದೇ ಲವ್ಲಿನಾ ಅಂತಿಮ ಹಂತದಲ್ಲಿ 5-0 ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಮಹಿಳೆಯರ ರಿಕರ್ವ್ ಆರ್ಚರಿ ವಿಭಾಗದಲ್ಲಿ ಭಾರತ ತಂಡವು 10 ಬಾರಿ ಚಾಂಪಿಯನ್ ಆಗಿದ್ದ ದಕ್ಷಿಣ ಕೋರಿಯಾವನ್ನು (South Korea) 5-3 ಅಂತರದಿಂದ ಸೋಲಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಚಿನ್ನ, 24 ಬೆಳ್ಳಿ ಹಾಗೂ 34 ಕಂಚಿನ ಪದಕಗಳು ಸೇರಿವೆ. ಇನ್ನೂ ಮಹಿಳಾ ಹಾಗೂ ಪುರುಷರ ಹಾಕಿ ಫೈನಲ್‌ನಲ್ಲಿ ಭಾರತ ತಂಡ ಚಿನ್ನಕ್ಕಾಗಿ ಬೇಟೆಯಾಡಲಿವೆ. ಕ್ರಿಕೆಟ್‌ನಲ್ಲಿಯೂ ಚಿನ್ನದ ಪದಕ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ: Asian Games: ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದುಕೊಟ್ಟ ನಿತೇಶ್; ಸ್ಕ್ವ್ಯಾಷ್ ತಂಡಕ್ಕೆ ಕಂಚು

