
ಮಂಡ್ಯ: ನರೇಂದ್ರ ಮೋದಿ ಪ್ರಧಾನಿ ಆಗಿರೋದು ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿ ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ. ಆರ್‍ಎಸ್‍ಎಸ್‍ನವರು ಯಾರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಲಿಲ್ಲ, ಪ್ರಾಣ ಕೊಡಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಗರ ಪಾಲು ಶೂನ್ಯ. ಅಂಥವರು ಇಂದು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಮೋದಿ ಕಾಂಗ್ರೆಸ್ ಕೊಡುಗೆ ಏನು? ಅಂತಾ ಕೇಳುತ್ತಾರೆ. ಅವರಿಗೆ ಇತಿಹಾಸ ಗೊತ್ತಿಲ್ಲದಿರಬಹುದು. ಗೊತ್ತಿದ್ದು, ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಿರಬಹುದು. ನಾನು ಮೋದಿಯನ್ನ ಕೇಳುತ್ತೇನೆ. ಈ ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು? ಅಂತಾ ಎಂದು ಸಿಡಿದರು. ಇದನ್ನೂ ಓದಿ: ಮೃತ ತಾಯಿಯ ತೋಳುಗಳಲ್ಲಿ 2 ರಾತ್ರಿಗಳನ್ನು ಕಳೆದ 3 ರ ಬಾಲಕಿ!
ಕಾಂಗ್ರೆಸ್ ದೇಶಕ್ಕೆ ಸಾಮಾಜಿಕ, ಆರ್ಥಿಕವಾಗಿ ಕೊಡುಗೆ ಕೊಟ್ಟಿದೆ. ಈ ಪಕ್ಷದ ಸದಸ್ಯನಾಗಿರೋದೇ ನಮ್ಮ ಹೆಮ್ಮೆ. ರೈತರಿಗೆ ವಿರುದ್ಧವಾದ ಮೂರು ಕಾಯ್ದೆ ತಂದರು. ಮೂರು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಈಗ ಕಾಯ್ದೆ ವಾಪಸ್ ಪಡೆದಿದೆ. ನಮ್ಮದು ರೈತರು, ದೇಶದ ಜನರ ಪರವಾದ ಕಾನೂನು. ಬಿಜೆಪಿ ಕೊಡುತ್ತಿರುವುದು ದೇಶಕ್ಕೆ ಮಾರಕವಾದ ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 365 ದಿನ ಕೆಲಸ ಮಾಡುವ ಶಕ್ತಿ ಇದೆ, ಪ್ರತಿ ದಿನ 15 ಗಂಟೆ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸುತ್ತೇನೆ: ಬೊಮ್ಮಾಯಿ
ನಮ್ಮ ಪಕ್ಷ ಸ್ಥಾಪನೆಯಾಗಿ 136 ವರ್ಷ ಕಳೆದಿದೆ. ಇದೀಗ 137ನೇ ವರ್ಷಾಚರಣೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟ ಮಾಡಲು ಕಾಂಗ್ರೆಸ್ ಹುಟ್ಟಿದ್ದಲ್ಲ. ಭಾರತೀಯರ ಕಷ್ಟ-ಸುಖ ಆಲಿಸೋಕೆ ಹುಟ್ಟಿದ ಪಕ್ಷವಾಗಿದೆ. ಬ್ರಿಟಿಷ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟಕ್ಕೆ ಹುಟ್ಟಿದ ಸಂಘಟನೆ. ನಮ್ಮ ಪಕ್ಷವು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದು. ಕೈ ಪಕ್ಷದ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ಹೋರಾಟ, ತ್ಯಾಗ, ಬಲಿದಾನ ಸ್ಮರಣೀಯವಾಗಿದೆ. ಮೈಸೂರು ಮಹಾರಾಜರು ಕೂಡ ಆಂಗ್ಲರ ಅಧೀನದಲ್ಲಿದ್ದರು. ಅವರ ಆದೇಶವನ್ನೇ ಮೈಸೂರು ಮಹಾರಾಜರು ಪಾಲನೆ ಮಾಡಬೇಕಿತ್ತು. ಅವರ ವಿರುದ್ಧ ಎದೆ ಕೊಟ್ಟು, ರಕ್ತ ಸುರಿಸಿದ ಜನರ ಶ್ರಮದ ಫಲವೇ ನಾವು ಎಂದು ನುಡಿದರು.