ಬೆಂಗಳೂರು: ಬೈಕ್‌ಗೆ (Bike) ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ದೇವಸ್ಥಾನಕ್ಕೆ ಬಿಎಂಟಿಸಿ ಬಸ್ (BMTC Bus) ಗುದ್ದಿದ ಘಟನೆ ಬೆಂಗಳೂರಿನ (Bengaluru) ಬೃಂದಾವನ ಬಸ್ ನಿಲ್ದಾಣದ ಬಳಿ ನಡೆದಿದೆ.
ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಘಟಕ 9ಕ್ಕೆ ಸೇರಿದ ಬಿಎಂಟಿಸಿ ಬಸ್ 8ನೇ ಮೈಲಿಯಿಂದ ಹೇರೋಹಳ್ಳಿ ಕ್ರಾಸ್‌ಗೆ ತೆರಳುತ್ತಿದ್ದಾಗ ಏಕಾಏಕಿ ಎದುರಿನಿಂದ ಬೈಕ್ ಬಂದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಶಿವ ದೇಗುಲಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಕೊನೆಗೂ ಟಿವಿಕೆಗೆ ಬೇಷರತ್ ಬೆಂಬಲ ಸೂಚಿಸಿದ ವಿಸಿಕೆ – ನಂಬರ್ ಗೇಮ್‌ನಲ್ಲಿ ವಿಜಯ್ ಸೇಫ್
ಬಸ್ ಗುದ್ದಿದ ಪರಿಣಾಮ ಶಿವನ ದೇಗುಲದ ಕಾಂಪೌಂಡ್ ಹಾಗೂ ಗ್ರಿಲ್‌ಗೆ ಹಾನಿಯಾಗಿದೆ. ಅಪಘಾತದಿಂದ ಬೈಕ್ ಸವಾರನ ಬಲಗೈಗೆ ತರಚಿದ ಗಾಯಗಳಾಗಿದೆ. ಬಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ಐದಳ್ಳ, ರಾಮದೇವರಹಳ್ಳಕ್ಕೆ ಈಶ್ವರ ಖಂಡ್ರೆ ಭೇಟಿ – ಒತ್ತುವರಿ ತೆರವು, ಅಕ್ರಮ ಮಂಜೂರಾತಿ ರದ್ದಿಗೆ ಸೂಚನೆ

