ಚೆನ್ನೈ: 2024ರಲ್ಲೇ ಮುಂದಿನ ಸಿಎಂ ಆಗುವ ಬಗ್ಗೆ ನಟ ವಿಜಯ್ (Actor Vijay) ಸುಳಿವು ನೀಡಿದ್ದರು ಎನ್ನುವ ಕೆಲವು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಹೌದು, 2024ರಲ್ಲಿ ರಿಲೀಸ್ ಆಗಿದ್ದ ಗೋಟ್ ಸಿನಿಮಾದಲ್ಲಿ ನಟ ವಿಜಯ್ ದಳಪತಿ (Vijay Thalapathy) ಟಿಎನ್ 07 ಸಿಎಂ 2026 ಎಂಬ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಬಳಸಿದ್ದರು. ಇದೀಗ ಅದಕ್ಕೆ ಸಂಬಂಧಿಸಿದ ಕೆಲವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಾಗಿ 2024ರಲ್ಲೇ ತಮಿಳುನಾಡಿನ ಮುಂದಿನ ಸಿಎಂ ಆಗುವ ಬಗ್ಗೆ ವಿಜಯ್ ಸುಳಿವು ನೀಡಿದ್ದರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ದಳಪತಿಗೆ ಕಾಂಗ್ರೆಸ್ ಬೆಂಬಲ
2024ರಲ್ಲಿ ವಿಜಯ್ ಟಿವಿಕೆ ಪಕ್ಷವನ್ನು ಪ್ರಾರಂಭಿಸಿದಾಗ, ಅವರು 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದವು. ಅದಾದ ಏಳು ತಿಂಗಳಲ್ಲಿ ಅವರ `ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಜೊತೆಗೆ ಸಿನಿಮಾದಲ್ಲಿ ತಮ್ಮ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಸುಳಿವು ನೀಡಿದ್ದರು ಎನ್ನಲಾಗಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ವಿಕ್ಟರಿ ಬಾರಿಸಿ, 50 ವರ್ಷಗಳಿಗೂ ಹೆಚ್ಚು ಕಾಲ ಭದ್ರವಾಗಿದ್ದ ದ್ರಾವಿಡ ಕೋಟೆಯನ್ನು ಛಿದ್ರಗೊಳಿಸಿದೆ. 234 ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಗದ್ದುಗೆ ಏರಲು 118 ಬಹುಮತಗಳ ಅವಶ್ಯಕತೆಯಿದೆ. ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಟಿವಿಕೆಗೆ ಬೆಂಬಲ ಸೂಚಿಸಿದೆ.ಇದನ್ನೂ ಓದಿ: ಒಡೆದು ಹೋಳಾಗುತ್ತಾ ಅಣ್ಣಾಡಿಎಂಕೆ – ವಿಜಯ್ ಬೆಂಬಲಿಸಲು 30ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆಯುವ ಎಚ್ಚರಿಕೆ!

