ಹುಬ್ಬಳ್ಳಿ: ನನ್ನ ಬಳಿ 365 ದಿನ ದಣಿವರಿಯದೇ ಕೆಲಸ ಮಾಡುವ ಶಕ್ತಿ ಇದೆ. ನಾನು ಪ್ರತಿ ದಿನ 15 ಗಂಟೆ ಕೆಲಸ ಮಾಡುವ ಸಂಕಲ್ಪ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಸರ್ಕಾರ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶಪಥ ಮಾಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಪಕ್ಷದ ಹಿರಿಯ ಮುಖಂಡರು ನನ್ನ ಮೇಲೆ ಬಹಳ ವಿಶ್ವಾಸ ಇಟ್ಟಿದ್ದಾರೆ, ಹೀಗಾಗಿ ಈಗಿನಿಂದಲೇ ಮುಂದಿನ ಚುನಾವಣೆ ಕಾರ್ಯ ಆರಂಭ ಮಾಡುತ್ತೇನೆ. ಹುಬ್ಬಳ್ಳಿಯಲ್ಲಿ ಎರಡು ದಿನ ಪಕ್ಷದ ಕಾರ್ಯಕಾರಿಣಿ ಇದೆ, ಮುಂದಿನ ಪಕ್ಷ ಸಂಘಟನೆ ಹಾಗೂ ರಾಜಕೀಯ ಬಗ್ಗೆ ಇಲ್ಲಿ ಚರ್ಚೆ ಆಗಲಿದೆ. ಸದ್ಯ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಏನು ಹೇಳಲ್ಲ, ಏನೆಲ್ಲಾ ಚರ್ಚೆ ಆಗಲಿದೆ ಎಂದು ಅರುಣ್ ಸಿಂಗ್ ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ
Live : ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟನೆ#BJPKarHubballiKaryakarini https://t.co/sYpcdn3zPV
— BJP Karnataka (@BJP4Karnataka) December 28, 2021
ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಎಂ.ಪಿ ಕುಮಾರಸ್ವಾಮಿಗೆ ನನ್ನ ಮೇಲೆ ಪ್ರೀತಿ ಇದೆ, ಅದಕ್ಕೆ ವಿಶ್ರಾಂತಿ ಬಗ್ಗೆ ಹೇಳಿದ್ದಾರೆ ಎಂದ ಸಿಎಂ, ನಮ್ಮದು ಒಂದು ಟೀಮ್ ಆಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ ಹಾಗೂ ಬಿಜೆಪಿ ಒಂದಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆ ಇಲ್ಲ: ಸುನಿಲ್ ಕುಮಾರ್