Bengaluru CityCinemaDistrictsKarnatakaLatestLeading NewsMain PostSandalwood

ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯನ ಬುರುಡೆಯಲ್ಲಿ ಮೆದುಳೇ ಇಲ್ಲ ಎಂದು ನಟಿ ರಮ್ಯಾ ವಾಗ್ದಾಳಿ ನಡೆಸಿದ್ದಾರೆ.

ಇನ್ ಸ್ಟಾ ಸ್ಟೋರಿಯಲ್ಲಿ ತೇಜಸ್ವಿ ಸೂರ್ಯ ಅವರ ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಶೇರ್ ಮಾಡಿಕೊಂಡ ರಮ್ಯಾ, ಈ ಮನುಷ್ಯನ ಬುರುಡೆಯಲ್ಲಿ ಮೆದುಳು ಇಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಜ.4ರ ವರೆಗೆ ರಾತ್ರಿ 10 ಗಂಟೆಯಿಂದ ಎಲ್ಲಾ ಫ್ಲೈಓವರ್ ಕ್ಲೋಸ್: ಕಮಲ್ ಪಂಥ್

ತೇಜಸ್ವಿ ಸೂರ್ಯ ಹೇಳಿದ್ದೇನು..?
ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೇ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ. ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳು ಆಗಿವೆ. ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಇದರಿಂದಾಗಿ ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು ಎಂದಿದ್ದರು.

ನಾವು ದೊಡ್ಡದಾಗಿ ಕನಸನ್ನು ಕಾಣಬೇಕು. ನಮ್ಮ ಮನೆಯ ಅಕ್ಕಪಕ್ಕ, ಗ್ರಾಮ, ಊರುಗಳಲ್ಲಿ ಘರ್ ವಾಪಸಿ ಮಾಡಬೇಕು. ದೇಶದಲ್ಲಿ ರಾಮಮಂದಿರವನ್ನು ಸ್ಥಾಪನೆ ಮಾಡಿದ್ದೇವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ಕಾಯ್ದೆಯನ್ನು ತೆಗೆದುಹಾಕಿದ್ದೇವೆ. ಘರ್ ವಾಪಸಿ ಆದ್ಯ ಕರ್ತವ್ಯದ ರೀತಿಯಲ್ಲಿ ನಾವು ಮಾಡಬೇಕಾಗಿದೆ. ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವು ಇದೆ. ಮಠ, ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ಸಲಹೆ ನೀಡಿದ್ದರು.

ಸಂಸದರು ಈ ರೀತಿ ಹೇಳುತ್ತಿದ್ದಂತೆಯೇ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿಆಡಲು ಆರಂಭಿಸಿದೆ. ಮಾತ್ರವಲ್ಲದೇ ಭಾರೀ ವಿವಾದ ಎಬ್ಬಿಸಿದೆ. ಕೂಡಲೇ ಸಂಸದರ ಟ್ವೀಟ್ ಮೂಲಕ ತಮ್ಮ ಮಾತನ್ನು ವಾಪಸ್ ಪಡೆದುಕೊಳ್ಳುವುದಾಗಿ ಬರೆದುಕೊಂಡಿದ್ದರು. ಈ ಮೂಲಕ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು.

Leave a Reply

Your email address will not be published.

Back to top button