ರೋಹಿತ್ ಶರ್ಮಾ (Rohit Sharma) ಧರಿಸಿದ್ದ 3.25 ಕೋಟಿ ರೂ. ಮೌಲ್ಯದ ಕೈ ಗಡಿಯಾರವನ್ನು ಯುವ ಅಭಿಮಾನಿಗಳು ಕದಿಯಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ರೋಹಿತ್ ಶರ್ಮಾ ಕಾರಿನಲ್ಲಿ ಆಗಮಿಸುತ್ತಿದ್ದಾಗ ಅಭಿಮಾನಿಗಳನ್ನು ಕಂಡು ಕಿಟಕಿ ಕೆಳಗಿಳಿಸಿ, ಕೈ ಬೀಸಿದ್ದಾರೆ. ಈ ವೇಳೆ ಇಬ್ಬರು ಯುವ ಅಭಿಮಾನಿಗಳು ಕಾರಿನ ಸಮೀಪಕ್ಕೆ ಬಂದು ಕೈ ಗಡಿಯಾರವನ್ನು ಕದಿಯಲು ಯತ್ನಿಸಿದ್ದಾರೆ. ಈ ವೇಳೆ ರೋಹಿತ್ ಕೈ ಒಳಗೆ ಎಳೆದುಕೊಂಡಿದ್ದಾರೆ.
ರೋಹಿತ್ ಶರ್ಮಾ ಧರಿಸಿದ ವಾಚ್ ರೋಲೆಕ್ಸ್ ಜಿರಾಫೆ ಬ್ರ್ಯಾಂಡ್‌ನದ್ದಾಗಿದ್ದು, 3.25 ಕೋಟಿ ರೂ. ಬೆಲೆಬಾಳುತ್ತದೆ ಎನ್ನಲಾಗಿದೆ.
Rohit Sharma Fans tried to snatch his 3.25 Cr “Giraffe” watch from his wrist. And suddenly he close the mirror. pic.twitter.com/vMIQFxcdxt
— Aman (@Proteinkohli) May 8, 2026
2026ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಆದರೆ ಏ.12ರಂದು ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಅದಾದ ಬಳಿಕ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗೆ ಮೇ 4ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯಕ್ಕೆ ಮತ್ತೆ ತಂಡಕ್ಕೆ ಮರಳಿದ್ದು, 44 ಎಸೆತಗಳಲ್ಲಿ 84 ರನ್ ಬಾರಿಸಿದ್ದಾರೆ.
ಸದ್ಯ ಮುಂಬೈ ಇಂಡಿಯನ್ಸ್ ಈವರೆಗೆ ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಸೋತಿದ್ದು, 3ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಪ್ಲೇಆಫ್‌ಗೆ ಎಂಟ್ರಿಯಾಗುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ. ಸದ್ಯ ಮುಂಬರುವ ನಾಲ್ಕು ಲೀಗ್ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೆ ಮಾತ್ರ ಪ್ಲೇಆಫ್‌ಗೆ ಎಂಟ್ರಿಯಾಗುವ ಸಾಧ್ಯತೆಯಿದೆ.

