ವಿಚ್ಛೇದನದ(Divorce) ಹಾದಿಯಲ್ಲಿರುವ ಬಾಲಿವುಡ್ ನಟಿ ಸೆಲೀನಾ ಜೇಟ್ಲಿ(Celina Jaitly) ತನ್ನ ಮಗನ ಸಮಾಧಿಯನ್ನು ಸ್ವಚ್ಛಗೊಳಿಸುತ್ತಾ ಕಣ್ಣೀರಿಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗುತ್ತಿದೆ.
ಸೆಲೀನಾ ಜೇಟ್ಲಿ ಮತ್ತು ಅವರ ಪತಿ ಪೀಟರ್ ಹಾಗ್ ನಡುವಿನ ವಿಚ್ಛೇದನ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಬಹಳ ದಿನಗಳೇ ಆಯಿತು. ಆದರೆ ಆಸ್ಟ್ರಿಯಾದಲ್ಲಿ ನೆಲೆಸಿರುವ ತಮ್ಮ ಪತಿ ತನ್ನ ಮಕ್ಕಳನ್ನು ಭೇಟಿ ಮಾಡಲು ಬಿಡುತ್ತಿಲ್ಲ. ತನ್ನ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ಗಂಭೀರ ಆರೋಪ ಮಾಡಿದ್ದಾರೆ.
ವಿಚ್ಛೇದನ ವಿಚಾರಣೆಗಾಗಿ ನಟಿ ಸೆಲೀನಾ ಆಸ್ಟ್ರಿಯಾ ದೇಶಕ್ಕೆ ತೆರಳಿದ್ದರು. ಆದರೆ, ನಟಿಯ ಗಂಡ ಪೀಟರ್ ಮಕ್ಕಳನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಮನನೊಂದು ಅವರು ಕೊನೆಗೆ ಸ್ವಲ್ಪ ಕಾಲದ ಹಿಂದೆ ನಿಧನವಾಗಿದ್ದ ತಮ್ಮ ಪುಟ್ಟ ಮಗ ಶಂಶೇರ್‌ನ ಸಮಾಧಿಯನ್ನು ನೋಡಲು ಹೋಗಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ಮಗನ ಸಮಾಧಿಯನ್ನು ಸ್ವಚ್ಛಗೊಳಿಸುತ್ತಾ ಭಾವುಕರಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಒಬ್ಬ ತಾಯಿಯಾಗಿ ನನ್ನ ನೋವನ್ನು ಜಗತ್ತಿಗೆ ತೋರಿಸಲು ಇದೊಂದೇ ದಾರಿ ಉಳಿದಿದೆ” ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಪತಿಯಿಂದ ಬೆದರಿಕೆ:
ಕೋರ್ಟ್ ಆದೇಶವಿದ್ದರೂ ತನ್ನ ಉಳಿದ ಮೂವರು ಮಕ್ಕಳನ್ನು ಪತಿ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಸೆಲೀನಾ ಆರೋಪಿಸಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ತಾಯಿಯ ಬಗ್ಗೆ ಕೆಟ್ಟ ಭಾವನೆಗಳನ್ನು ಬಿತ್ತಲಾಗುತ್ತಿದೆ. ಮಕ್ಕಳು ನನ್ನೊಂದಿಗೆ ಮಾತನಾಡದಂತೆ ಬೆದರಿಕೆ ಹಾಕಲಾಗಿದೆ. ಮಕ್ಕಳಿಗಾಗಿ ದೇಶವನ್ನೇ ಬಿಟ್ಟು ಬಂದ ತಾಯಿಗೆ ಇಂದು ಮಕ್ಕಳ ಸಂಪರ್ಕವೇ ಇಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮಿಳುನಾಡು ರಾಜಕೀಯಕ್ಕೆ ತ್ರಿಷಾ ಎಂಟ್ರಿ? – ವಿಜಯ್ ಗೆದ್ದ ಕ್ಷೇತ್ರದಲ್ಲೇ ಸ್ಪರ್ಧಿಸ್ತಾರಾ ಗೆಳತಿ?
ಆಸ್ತಿಗಾಗಿ ಕಿರುಕುಳ:
ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದರೂ ತನ್ನ ಆಸ್ತಿಯ ಮೇಲೆ ಗಂಡ ಪೀಟರ್ ಕಣ್ಣಿಟ್ಟಿದ್ದಾನೆ. ಉಡುಗೊರೆ ನೀಡುತ್ತೇನೆಂದು ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಮದುವೆಯ ನಂತರ ಪತಿಯ ಏಳಿಗೆಗಾಗಿ ಶ್ರಮಿಸಿದ ನನಗೆ ಈಗ ಆತನಿಂದಲೇ ಮೋಸವಾಗಿದೆ ಎಂದು ನಟಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸೆಲೀನಾ ಮತ್ತು ಪೀಟರ್ 2010 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಎರಡು ಬಾರಿ ಅವಳಿ ಗಂಡು ಮಕ್ಕಳು ಜನಿಸಿದ್ದರು. 2017 ರಲ್ಲಿ ಜನಿಸಿದ ಎರಡನೇ ಅವಳಿ ಮಕ್ಕಳಲ್ಲಿ ಒಬ್ಬನಾದ ಶಂಶೇರ್ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದ.

