ಮೈಸೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಬಗ್ಗೆ ಸಿದ್ದರಾಮಯ್ಯ (Siddaramaiah) ಅವರಿಗೂ ಬೇಸರ, ಅಸಮಾಧಾನ ಇದೆ. ಅದೇ ಕಾರಣಕ್ಕೆ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ (KN Rajanna) ಅವರಿಗೂ ಈ ಬಗ್ಗೆ ಬೇಸರ ಇದೆ. ಸತ್ಯ ನೇರವಾಗಿ ಮಾತನಾಡಿದ ಫಲಾನುಭವಿ ರಾಜಣ್ಣ ಅವರು. ಪಕ್ಷದಲ್ಲಿ ನೇರವಾಗಿ ಮಾತನಾಡುವವರಿಗೆ ಅವಕಾಶ ಇಲ್ಲದಂತಾಗಿದೆ. ನಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ, ಬೇಸರ ಆಗಿದೆ. ರಾಜಣ್ಣ ಅವರ ಮೇಲೆ ಯಾವುದೇ ಆರೋಪ ಇರಲಿಲ್ಲ. ಆಗ ಮಾತನಾಡಿದ್ದರು, ಅದು ಮುಗಿದಿತ್ತು ಎಂದರು. ಇದನ್ನೂ ಓದಿ: ಶಾಲೆಯ ಒಳಗಡೆ 30 ಸೆಕೆಂಡ್‌ನಲ್ಲಿ 34 ಬಾರಿ ಶಿಕ್ಷಕಿಯನ್ನು ಇರಿದು ಕೊಂದ
ಪಕ್ಷ ಈ ವರ್ತನೆ ಬದಲಾಯಿಸಿಕೊಳ್ಳಬೇಕು. ಬದಲಾಯಿಸಿಕೊಂಡರೆ ಪಕ್ಷಕ್ಕೆ ಒಳ್ಳೆಯದು. ಇಲ್ಲ ಮುಂದೆ ಬರುವ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ಬೇಸರದಿಂದ ಪಕ್ಷ ಬಿಡುವ ಪ್ರಶ್ನೆ ಇಲ್ಲ. ಪಕ್ಷದ ಒಳಗೆ ಫೈಟ್ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಾರಾಯಣಪುರ ಡ್ಯಾಮ್‌ನಿಂದ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆ
