– ಪ್ರಮಾಣವಚನ ಸ್ವೀಕರಿಸದಂತೆ ಮಾಜಿ ಸಿಎಂ ಸೂಚನೆ
ಬೆಂಗಳೂರು: ಮಂತ್ರಿ ಆಗ್ತೀನಿ ಅಂತ ಗೊತ್ತಿರಲಿಲ್ಲ. ನಮ್ಮ ನಾಯಕರು ಗಾಡ್ ಗಿಫ್ಟ್ ನೀಡಿದ್ದಾರೆ ಎಂದು ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ (Gayathri Shanthegowda) ಅವರು ಹೇಳಿದ್ದಾರೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪ್ರಮಾಣವಚನ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮಂತ್ರಿಸ್ಥಾನ ಸಿಕ್ಕ ಬಗ್ಗೆ ಗೊತ್ತಾದ ಮೇಲೆ ನಿಜಕ್ಕೂ ಸಂತೋಷ ಹಾಗೂ ಆಶ್ಚರ್ಯ ಎರಡೂ ಒಟ್ಟಿಗೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಕೋರ್ಟ್‌ನಿಂದ ಆದೇಶ ಹೊರಬಂದಿದ್ದು, ಎಂಎಲ್‌ಸಿಯಾಗಿ ಘೋಷಣೆಯಾಗಿದೆ. ಅದರ ಬೆನ್ನಲ್ಲೇ ಇದೀಗ ಮಂತ್ರಿಸ್ಥಾನ ಸಿಕ್ಕಿದೆ. ನಿಜಕ್ಕೂ ಸಂತೋಷ ಆಗ್ತಿದೆ. ಮಾತಾಡೋಕು ಆಗ್ತಿಲ್ಲ. ಇನ್ನೂ ಯಾವ ಇಲಾಖೆ ಬೇಕು ಎನ್ನುವ ಬಗ್ಗೆ ನಾನು ಯೋಚನೆ ಮಾಡಿಲ್ಲ. 30 ನಿಮಿಷದ ಹಿಂದಷ್ಟೇ ವಿಷಯ ಗೊತ್ತಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Karnataka Cabinet Expansion Live Update| ನಾನು ರಾಜೀನಾಮೆ ಬೆದರಿಕೆ ಹಾಕಿಲ್ಲ: ಎಸ್‌ಎಸ್ ಮಲ್ಲಿಕಾರ್ಜುನ್
ಇದೊಂದು ಗಾಡ್ ಗಿಫ್ಟ್. ಮರೆಯೋಕೂ ಆಗಲ್ಲ. ಮಂತ್ರಿ ಆಗ್ತೀನಿ ಅಂತ ಗೊತ್ತಿರಲಿಲ್ಲ. ಅಂತಹ ಗಾಡ್ ಗಿಫ್ಟ್‌ನ್ನು ನನ್ನ ನಾಯಕರುಗಳು ಕೊಟ್ಟಿದ್ದಾರೆ. ಎಲ್ಲ ಹಿರಿಯರ ಮಾರ್ಗದರ್ಶನದಂತೆ ಸಚಿವ ಸ್ಥಾನವನ್ನು ನಡೆಸಿಕೊಂಡು ಹೋಗ್ತೀನಿ ಎಂದು ತಿಳಿಸಿದ್ದಾರೆ.
ಸಚಿವ ಸ್ಥಾನ ಕೈತಪ್ಪುವ ಆತಂಕದಲ್ಲಿ ಗಾಯತ್ರಿ ಶಾಂತೇಗೌಡ
ಡಿಕೆಶಿ ಸಂಪುಟದ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಎಐಸಿಸಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರಿತ್ತು. ಆದರೆ ಈಗ ದಾವಣಗೆರೆ ಶಾಸಕ ಎಸ್‌ಎಸ್ ಮಲ್ಲಿಕಾರ್ಜುನ್ ಹೆಸರು ಹೊಸದಾಗಿ ಎಂಟ್ರಿಯಾಗಿದೆ. ಇದೀಗ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೂ ಸಿಕ್ಕಿರುವ ಸಚಿವ ಸ್ಥಾನ ಕೈತಪ್ಪುವ ಆತಂಕವಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರಿಯಾಕೃಷ್ಣ ಬೆಂಬಲಿಗರ ತೀವ್ರ ಆಕ್ರೋಶ
