ಬೆಂಗಳೂರು: ಮೈತ್ರಿ ಸರ್ಕಾರ ಶಾಸಕರ ರಾಜೀನಾಮೆ ನಡುವೆ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿ ನಾಯಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ಈ ಸಂದರ್ಭದಲ್ಲಿಯೇ ಈ ಹಿಂದೆ 20-20 ಸರ್ಕಾರ ರಚನೆಯ ರೂವಾರಿ ಎನಿಸಿಕೊಂಡಿದ್ದ ಹಿರಿಯ ವಕೀಲರಾದ ದೊರೆರಾಜು ಅವರು ಇಂದು ಕದ್ದು ಮುಚ್ಚಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.
ಸಿಎಂ ಅವರನ್ನು ಭೇಟಿ ಮಾಡಲು ತಾಜ್ ವೆಸ್ಟೆಂಡ್ ಹೋಟೆಲ್ ಆಗಮಿಸಿದ್ದ ದೊರೆರಾಜು ಅವರು ಹೋಟೆಲಿನಿಂದ ಹೊರ ನಡೆಯುವ ವೇಳೆ ಮಾಧ್ಯಮಗಳ ಕ್ಯಾಮೆರಾಗೆ ಸಿಕ್ಕರು. ಆದರೆ ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ನೋಡುತ್ತಿದಂತೆ ಮುಖ ಮುಚ್ಚಿಕೊಂಡ ಅವರು ಸ್ಥಳದಿಂದ ಹೊರ ನಡೆದರು.
Advertisement
Advertisement
ಹೋಟೆಲ್‍ನಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ್ದ ದೊರೆಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮೈತ್ರಿ ಸರ್ಕಾರದ ರೂವಾರಿ ಎನಿಸಿಕೊಂಡಿದ್ದ ಅವರು ಮಾಧ್ಯಮಗಳನ್ನು ನೋಡಿ ಗಾಬರಿಗೊಂಡಿದ್ದು, ಏಕೆ ಎಂಬ ಅನುಮಾನ ಮೂಡಿದೆ. ಸಿಎಂ ಅವರ ಕಾರನ್ನು ಏರಿದ ದೊರೆರಾಜು ಅವರು ಅಲ್ಲಿಯೂ ಮಾಧ್ಯಮಗಳನ್ನು ನೋಡಿ ಮುಖ ಮುಚ್ಚಿಕೊಂಡಿದ್ದರು.
Advertisement
Advertisement
ಸಿಎಂ ಅವರ ಭೇಟಿಗೆ ಆಗಮಿಸಿದ್ದ ಅವರು ಹೋಟೆಲ್ ಎದುರು ಕಾದು ನಿಂತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಿಎಂ ಅವರು ದೊರೆಸ್ವಾಮಿ ಅವರನ್ನು ಕಂಡು ಕರೆ ನೀಡಿದ್ದರು. ಕೂಡಲೇ ಸಿಎಂರತ್ತ ತೆರಳಿದ್ದ ದೊರೆಸ್ವಾಮಿ ಅವರು ಕಾರಿನಲ್ಲೇ ಹೋಟೆಲ್ ಒಳಗೆ ತೆರಳಿದ್ದರು. ಆ ಬಳಿಕ ಸಿಎಂ ಅವರೊಂದಿಗೆ ಮಾತುಕತೆ ನಡೆಸಿ ಹೊರ ನಡೆದಿದ್ದರು. ಈ ಸಂದರ್ಭದಲ್ಲೂ ಮಾಧ್ಯಮಗಳಿಗೆ ಮುಖ ತೋರದೆ ತೆರಳಲು ಯತ್ನಿಸಿದರು. ಸಾಮಾನ್ಯವಾಗಿ ಸಿಎಂ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ಯಾವುದೇ ವ್ಯಕ್ತಿಯಾದರೂ ನೇರವಾಗಿ ತೆರಳುತ್ತಾರೆ. ಆದರೆ ಹಿರಿಯ ವಕೀಲರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.