ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರನ್ನು ಜೆಡಿಎಸ್ ರೆಬಲ್ ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಅವರು ಭೇಟಿಯಾಗಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಭೆ ನಡೆಸಿದರು. ಸಭೆ ನಡೆಸುತ್ತಿದ್ದ ಕೊಠಡಿಗೆ ತೆರಳಿ ಜಿ.ಟಿ.ದೇವೇಗೌಡರು ಭೇಟಿಯಾದರು. ಸಿಎಂ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರಕ್ಕೆ ಯಾವಾಗ ಅನುದಾನ ಕೊಡ್ತೀರಿ ಅಂತಾ ಕೇಳೋಕೆ ಸಿಎಂ ಅವರನ್ನ ಮೊದಲ ಬಾರಿಗೆ ಭೇಟಿ ಮಾಡಿದ್ದೆ ಎಂದು ತಿಳಿಸಿದರು.
ಮೈಸೂರಲ್ಲಿ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲಾ ಅವರೇ ಹೇಳಿದ್ದಾರೆ. ನಾನೇನು ನೋಡಿಲ್ಲ. ಮತದಾನ ಮಾಡಿದ್ದೀನಿ ಎಂದು ಹೇಳಿದರು.
ಮುಂದಿನ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಇನ್ನೂ ಎರಡು ವರ್ಷ ಇದೆ. ಹಿರಿಯರಿದ್ದಾರೆ, ಯಾವಾಗಲೂ ದೇವೇಗೌಡರನ್ನು ಭೇಟಿ ಮಾಡೋದು ಇದ್ದೇ ಇದೆ ಎಂದರು.
