ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದಾಗ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಯಚೂರಿನ (Raichuru) ಸಿಂಧನೂರು (Sindhanuru) ತಾಲೂಕಿನ ಕೆ.ಹಂಚಿಕಾಳ ಕ್ಯಾಂಪಿನಲ್ಲಿ ನಡೆದಿದೆ.
18 ತಿಂಗಳ ಅನಂ ಬಲಿಯಾದ ಪುಟ್ಟ ಬಾಲಕಿ. ಇದನ್ನೂ ಓದಿ: ಚಾಕು ಇರಿದು ಪತಿಯ ಹತ್ಯೆ, ಮಗನ ಕೊಲೆಗೂ ಯತ್ನ – ಶವದ ಪಕ್ಕದಲ್ಲೇ ರಾಕ್ಷಸಿಯಂತೆ ಮೊಬೈಲ್ ನೋಡ್ತಿದ್ದ ಹಂತಕಿ ಪತ್ನಿ
ನಿದ್ದೆಯಿಂದ ಎದ್ದು ಹೊರಗಡೆ ಬಂದಿದ್ದ ಮಗು ಮನೆ ಮುಂದೆ ಆಟವಾಡುತ್ತಿತ್ತು. ಈ ವೇಳೆ ಆರೇಳು ಬೀದಿ ನಾಯಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಮಗುವನ್ನು ಎಳೆದಾಡಿ ಮನಬಂದಂತೆ ಕಚ್ಚಿವೆ. ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: FIFA World Cup: ಮೆಸ್ಸಿ ಮ್ಯಾಜಿಕ್ – ಸತತ 2ನೇ ಟ್ರೋಫಿಗಾಗಿ ಫೈನಲ್‌ಗೆ ಅರ್ಜೆಂಟೀನಾ ಎಂಟ್ರಿ, ಇಂಗ್ಲೆಂಡ್ ಔಟ್
