Connect with us

Bengaluru City

ಮರಗಳನ್ನು ರಕ್ಷಿಸಲು ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

Published

on

Share this

ಬೆಂಗಳೂರು: ಅಪಘಾತದಿಂದ ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧನರಾಗಿದ್ದು, ಚಂದನವನಕ್ಕೆ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಈ ಹೊತ್ತಿನಲ್ಲಿ ಸಂಚಾರಿ ವಿಜಯ್ ಅಭಿನಯಿಸಿರುವ ತಲೆದಂಡ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

ನಾನು ಅವನಲ್ಲ ಅವಳು, ಹರಿವು ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಜನರ ಪ್ರೀತಿ ಗಳಿಸುವುದರ ಜೊತೆಗೆ ಪ್ರಶಂಸೆ ಪಡೆದಿದ್ದ ನಟ ಸಂಚಾರಿ ವಿಜಯ್, ತಲೆದಂಡ ಸಿನಿಮಾದ ಟೀಸರ್‌ನಲ್ಲಿ ಕೂಡ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಸಂಚಾರಿ ವಿಜಯ್ ಬುದ್ಧಿ ಮಾಂದ್ಯನ ಪಾತ್ರದಲ್ಲಿ ಅಭಿನಯಿಸಿದ್ದು, ಬುದ್ಧಿವಂತರೂ ಮಾಡುವ ಅನ್ಯಾಯದ ವಿರುದ್ಧ ಬುದ್ಧಿಮಾಂದ್ಯನು ಹೋರಾಡುತ್ತಿರುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಟೀಸರ್‌ನಲ್ಲಿ ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂದು ವಿಜಯ್ ಮರಗಳಿಗೆ ಅಡ್ಡಲಾಗಿ ನಿಂತಿರುವುದನ್ನು ನೋಡಬಹುದಾಗಿದೆ. ಟೀಸರ್‌ನಲ್ಲಿ ವಿಜಯ್ ಮುಗ್ಧ ಅಭಿನಯ ನೋಡಿದರೆ ನಿಜಕ್ಕೂ ಎಲ್ಲರ ಮನಕಲಕುವಂತಿದೆ. ಇದನ್ನೂ ಓದಿ: ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ

ಈಗಾಗಲೇ ನಾನು ಅವನಲ್ಲ ಅವಳು ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ್ ತಲೆದಂಡ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿ ಎಲ್ಲರ ಮನ ಗೆಲ್ಲುತ್ತಾರೆ ಎಂಬುವುದಕ್ಕೆ ಯಾವುದೇ ಅನುಮಾನವಿಲ್ಲ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್

ತಲೆದಂಡ ಮಾತ್ರವಲ್ಲದೇ ಅವಸ್ಥಾಂತರ, ಲಂಕೆ, ಮೋಲೊಬ್ಬ ಮಾಯಾವಿ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದರು. ಇನ್ನೂ ಘೋಷಿಸದೇ ಇರುವ ಹಲವಾರು ಪ್ರಾಜೆಕ್ಟ್‍ಗಳು ವಿಜಯ್ ಕೈನಲ್ಲಿದ್ದವು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

Click to comment

Leave a Reply

Your email address will not be published. Required fields are marked *

Advertisement