CinemaLatestMain PostSouth cinema

ವಿಜಯ್ ದೇವರಕೊಂಡ ಜೊತೆ ಕ್ಯೂಟ್ ಫೋಟೋ ಶೇರ್ ಮಾಡಿದ ಸಮಂತಾ

ಟಾಲಿವುಡ್ ಕ್ಯೂಟ್ ಬ್ಯೂಟಿ ಸಮಂತಾ ರಾತ್ ಪ್ರಭು ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೂ, ಅವಕಾಶ ಮಾಡಿಕೊಂಡು ತಮ್ಮ ಸಿನಿ ಜರ್ನಿಯಲ್ಲಿ ಜೊತೆಗಿದ್ದ ತಾರೆಯರನ್ನು ನೆನೆಪಿಸಿಕೊಳ್ಳುತ್ತಿರುತ್ತಾರೆ. ಈ ಹಿನ್ನೆಲೆ ಇಂದು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಫೋಟೋ ಶೇರ್ ಮಾಡಿ ವಿಶ್‌ ಮಾಡಿದ್ದಾರೆ

ವಿಜಯ್ ದೇವರಕೊಂಡ ಅವರೊಂದಿಗೆ ನಟಿಸುತ್ತಿರುವ ಸಮಂತಾ ಅವರು ನಟನ ಜೊತೆಗಿನ ಮುದ್ದಾದ ಫೋಟೋ ಶೇರ್ ಮಾಡಿಕೊಂಡಿದ್ದು, ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಸಮಂತಾ ಅವರು ಟ್ವೀಟ್‌ನಲ್ಲಿ  ‘ನಂಬಲಾಗದಷ್ಟು ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದೇವರಕೊಂಡ ಅವರ ವ್ಯಕ್ತಿತ್ವ ಬೇರೆಯವರಿಗೆ ಸ್ಪೂರ್ತಿ ನೀಡುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಟ್ವೀಟ್‌ನಲ್ಲಿ ಅವರು, ‘ಹುಟ್ಟುಹಬ್ಬದ ಶುಭಾಶಯಗಳು, ಎಲ್ಲರ ಪ್ರೀತಿ ಮತ್ತು ಮೆಚ್ಚುಗೆಗೆ ನೀವು ಅರ್ಹರು. ನೀವು ಕೆಲಸ ಮಾಡುವುದನ್ನು ನೋಡುವುದು ನಂಬಲಾಗದಷ್ಟು ಸ್ಫೂರ್ತಿದಾಯಕವಾಗಿದೆ. ದೇವರು ಆಶೀರ್ವದಿಸಲಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಸಮಂತಾ ಮತ್ತು ವಿಜಯ್ ಕಾಶ್ಮೀರದಲ್ಲಿ ವಿಡಿ 11 ರ ಸೆಟ್‌ನಲ್ಲಿರುವ ಫೋಟೋ ಶೇರ್ ಮಾಡಿದ್ದು, ಇಬ್ಬರೂ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿಜಯ್ ತನ್ನ ತಂಡದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕೇಕ್ ಕಟ್ ಮಾಡಿದ್ದಾರೆ. ನಿರ್ಮಾಪಕರು ವಿಜಯ್ ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿವೆ

 

Leave a Reply

Your email address will not be published.

Back to top button