BollywoodCinemaLatestMain Post

ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಮನೆಗೆ ಕರೆತಂದಿದ್ದರು. ಆಸ್ಕರ್ ಸಮಯದಲ್ಲಿ ಪ್ರಿಯಾಂಕಾ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದು ಬಿಟ್ಟರೇ ಬೇರೆ ಯಾವುದೇ ವಿಷಯ, ಫೋಟೋಗಳನ್ನು ಅವರು ಶೇರ್ ಮಾಡಿರಲಿಲ್ಲ. ಆದರೆ ಭಾನುವಾರ ತಾಯಂದಿರ ದಿನವಾದ ಹಿನ್ನೆಲೆ ಮೊದಲ ಬಾರಿಗೆ ತನ್ನ ಮುದ್ದು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಮಗಳ ಫೋಟೋ ಶೇರ್ ಮಾಡಿದ ದಂಪತಿ ಮುದ್ದಾದ ಸಾಲು ಬರೆದು ಪೋಸ್ಟ್ ಮಾಡಿದ್ದಾರೆ.

ನಿಕ್ ಜೋನಾಸ್ ಇನ್‌ಸ್ಟಾದಲ್ಲಿ ಮಗಳು ಮಾಲ್ಟಿ ಮೇರಿ ಮತ್ತು ಪತ್ನಿ ಪ್ರಿಯಾಂಕಾ ಚೋಪ್ರಾ ಫೋಟೋ ಶೇರ್ ಮಾಡಿ ವಿಶೇಷ ಸಾಲು ಬರೆದು ವಿಶ್ವತಾಯಂದಿರ ದಿನಕ್ಕೆ ಅರ್ಪಿಸಿದ್ದಾರೆ. ಇನ್‌ಸ್ಟಾದಲ್ಲಿ ಅವರು, ವಿಶ್ವದ ಅದ್ಭುತ ತಾಯಂದಿರಿಗೆ ಮತ್ತು ಎಲ್ಲರನ್ನು ಪ್ರೀತಿಯಿಂದ ಆರೈಕೆ ಮಾಡುವವರಿಗೆ ತಾಯಂದಿರ ದಿನದ ಶುಭಾಶಯಗಳು. ಆದರೆ ನನ್ನ ಅದ್ಭುತ ಪತ್ನಿ ಪ್ರಿಯಾಂಕಾ ಚೋಪ್ರಾ ಅವರ ಮೊದಲ ತಾಯಂದಿರ ದಿನವಾಗಿರುವುದರಿಂದ ಅವರಿಗೆ ವಿಶೇಷ ತಾಯಂದಿರ ದಿನದ ಶುಭಾಶಯ ಹೇಳುವ ಮುನ್ನ ಆಕೆಯ ಬಗ್ಗೆ ಸ್ವಲ್ಪ ಹೇಳಿಕೊಳ್ಳಬೇಕು. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್ 

 

View this post on Instagram

 

A post shared by Nick Jonas (@nickjonas)

ಬೇಬ್, ನೀವು ನನಗೆ ಎಲ್ಲ ರೀತಿಯಲ್ಲೂ ಸ್ಫೂರ್ತಿ ನೀಡುತ್ತೀರಿ. ನೀವು ಈ ಹೊಸ ರೂಲ್ ತುಂಬಾ ಸುಲಭವಾಗಿ ನಿಭಾಯಿಸುತ್ತಿದ್ದೀರ. ನಿಮ್ಮೊಂದಿಗೆ ಈ ಪ್ರಯಾಣದಲ್ಲಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀವು ಈಗಾಗಲೇ ನಂಬಲಾಗದ ತಾಯಿಯಾಗಿದ್ದೀರಿ. ತಾಯಂದಿರ ದಿನದ ಶುಭಾಶಯಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರಿಯಾಂಕಾ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಿಯಾಂಕ ಸಹ ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ್ದು, ಈ ತಾಯಂದಿರ ದಿನದಂದು ನಾವು ಕಳೆದ ಕೆಲವು ತಿಂಗಳುಗಳಿಂದ ಅನುಭವಿಸುತ್ತಿರುವ ಪ್ರಯಾಣವನ್ನು ತಿಳಿಸಲು ಮಾತುಗಳೇ ಬರುತ್ತಿಲ್ಲ. ಈ ವೇಳೆ ನಮಗೆ ಅನೇಕರು ಸಹಾಯ ಮಾಡಿದ್ದಾರೆ. ನಮ್ಮ ಪುಟ್ಟ ಹುಡುಗಿ ಅಂತಿಮವಾಗಿ ಮನೆಗೆ ಬಂದಿದ್ದಾಳೆ. ಇದರಿಂದ ನಮ್ಮ ಕುಟುಂಬದ ಪ್ರಯಾಣವು ವಿಶಿಷ್ಟವಾಗಿದೆ. ಹಲವು ತಿಂಗಳಿಂದ ನಾವು ಅನುಭವಿಸುತ್ತಿರುವ ಪ್ರತಿ ಕ್ಷಣವೂ ಅಮೂಲ್ಯ ಮತ್ತು ಪರಿಪೂರ್ಣವಾಗಿದೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ 

ನಮ್ಮ ಪುಟ್ಟ ಹುಡುಗಿ ಕೊನೆಗೂ ಮನೆಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರತಿ ಹೆಜ್ಜೆಯಲ್ಲೂ ನಿಸ್ವಾರ್ಥವಾಗಿದ್ದ ರಾಡಿ ಚಿಲ್ಡ್ರನ್ಸ್ ಲಾ ಜೊಲ್ಲಾ ಮತ್ತು ಲಾಸ್ ಏಂಜಲೀಸ್‌ನ ಸೀಡರ್ ಸಿನಾಯ್ನಲ್ಲಿರುವ ಪ್ರತಿಯೊಬ್ಬ ವೈದ್ಯರು, ನರ್ಸ್ ಮತ್ತು ತಜ್ಞರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ಮುಂದಿನ ಅಧ್ಯಾಯ ಈಗ ಪ್ರಾರಂಭವಾಗುತ್ತದೆ. ಮಮ್ಮಿ ಮತ್ತು ಡ್ಯಾಡಿ ನಿನ್ನನ್ನು ಪ್ರೀತಿಸುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ದಂಪತಿ ಪೋಸ್ಟ್ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಕ್ಯೂಟ್ ಫ್ಯಾಮಿಲಿ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published.

Back to top button