ಹಾಸನ: ಕ್ಯೂರಿಂಗ್ ಮಾಡುವಾಗ ವಿದ್ಯುತ್ ಶಾಕ್‌ನಿಂದ (Electric Shock) ಅರಣ್ಯ ಇಲಾಖೆ (Forest Department) ಆರ್‌ಎಫ್‌ಓ ಸಾವನ್ನಪ್ಪಿರುವ ಘಟನೆ ಹಾಸನ (Hassan) ನಗರದ ಸತ್ಯಮಂಗಲ ಬಡಾವಣೆಯಲ್ಲಿ ನಡೆದಿದೆ.
ಜಗದೀಶ್.ಪಿ (46) ಮೃತಪಟ್ಟ ಅರಣ್ಯಾಧಿಕಾರಿ. ಕುಣಿಗಲ್‌ನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ನೂತನ ಮನೆ ನಿರ್ಮಿಸುತ್ತಿದ್ದರು. ಇಂದು (ಜೂ.21) ಮನೆಯ ಗೋಡೆಗೆ ನೀರು ಹಾಕುವಾಗ ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅನುಮಾನಾಸ್ಪದ ಸಾವು
2015 ರಿಂದ 2020 ರವರೆಗೆ ಹಾಸನ ಜಿಲ್ಲೆಯಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸಿದ್ದರು. ಜಗದೀಶ್.ಪಿ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 2 ಕೋಟಿ ವಿಮೆಗಾಗಿ ಗಂಡನನ್ನು ಕೊಂದ ಮಗಳು ಅರೆಸ್ಟ್ – ಊರಲ್ಲಿ ತಲೆ ಎತ್ತಲಾಗದೆ ತಾಯಿ ಆತ್ಮಹತ್ಯೆ
