ದಾವಣಗೆರೆ: ಇಲ್ಲಿನ (Davanagere) ಕೈದಾಳೆ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾಗಿದ್ದ (Love Marriage) ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗ್ರಾಮದ ನಿವಾಸಿಯಾಗಿದ್ದ ಅಮೂಲ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವತಿ. ಈಕೆ ಅದೇ ಗ್ರಾಮದ ಧನುಷ್ (19) ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇಬ್ಬರು ಕ್ಲಾಸ್‌ಮೇಟ್ ಆಗಿದ್ದರು. ಇವರ ಪ್ರೀತಿಗೆ ಜಾತಿ ಕಾರಣಕ್ಕೆ ಕುಟುಂಬಸ್ಥರು ವಿರೋಧಿಸಿದ್ದರು. ಆದರೆ ಇಬ್ಬರೂ ಪೊಲೀಸ್ ಭದ್ರತೆಯಲ್ಲಿ ಮದುವೆಯಾಗಿದ್ದರು. ಇದನ್ನೂ ಓದಿ: ಬೈಕ್ ಪಾರ್ಕಿಂಗ್ ವಿಚಾರಕ್ಕೆ ಜಗಳ – ಚಾಕು ಇರಿದು ಮಹಿಳೆ ಹತ್ಯೆ, ಪತಿಗೆ ಗಂಭೀರ ಗಾಯ
ಮದುವೆಯಾಗಿ ಒಂದೇ ವರ್ಷದಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಯುವತಿಯ ಪೋಷಕರು ಆಕೆಯ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಈ ಸಂಬಂಧ ಧನುಷ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದಾವಣಗೆರೆ ಮಹಿಳಾ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನುಷ್ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್ ಬೆದರಿಕೆ – ಸ್ನೇಹಿತೆ ಅರೆಸ್ಟ್
