ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ, ಈಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ದಾಖಲೆಯ ಮಟ್ಟದಲ್ಲಿ ಆದಾಯವನ್ನು ಗಳಿಸಿದೆ.
ಇಷ್ಟು ದಿನ ರೈಲ್ವೆ ಇಲಾಖೆ ಆದಾಯದ ಮೂಲ ಸರಕು ಸಾಗಾಣಿಕೆಯಾಗಿತ್ತು. ಆದರೆ ಈ ಮಾತನ್ನು ನೈಋತ್ಯ ರೈಲ್ವೆ ವಿಭಾಗ ಸುಳ್ಳಾಗಿಸಿದೆ. ಕೇವಲ ಪ್ಯಾಸೆಂಜರ್ ರೈಲು(Passenger Train) ಓಡಿಸಿಯೇ ಸಾವಿರಾರು ಕೋಟಿ ರೂ. ಲಾಭ ಮಾಡಿದ್ದು, ಈ ಮೂಲಕ ನೂತನ ದಾಖಲೆಯನ್ನು ನಿರ್ಮಾಣವಾಗಿದೆ.
Advertisement
Advertisement
ಈ ವರ್ಷದ ಏಪ್ರಿಲ್‍ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಪ್ಯಾಸೆಂಜರ್ ರೈಲು(Train) ಸಂಚಾರದಿಂದ ರೈಲ್ವೆಗೆ ಬರೊಬ್ಬರಿ 1,048 ಕೋಟಿ ರೂ. ಲಾಭವಾಗಿದೆ. ಇದು ನೈಋತ್ಯ ರೈಲ್ವೆ ವಿಭಾಗದ ಇತಿಹಾಸದಲ್ಲಿ ಮೊದಲ ದಾಖಲೆಯಾಗಿದೆ. ಕಳೆದ ವರ್ಷ ಏಪ್ರಿಲ್‍ನಿಂದ ಆಗಸ್ಟ್‌ವರೆಗೆ ಬರೀ 450 ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು
Advertisement
ಕೋವಿಡ್(Covid) ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲುಗಳ ಸೇವೆ ಬಂದ್ ಮಾಡಲಾಗಿತ್ತು. ಇದು ಇಲಾಖೆಗೆ ಸಾಕಷ್ಟು ಹೊಡೆತ ನೀಡಿದ್ದು ಸುಳ್ಳಲ್ಲ. ಇದನ್ನೆ ಸವಾಲಾಗಿ ಸ್ವೀಕರಿಸಿದ ಆಡಳಿತ ವಿಭಾಗ ಕೋವಿಡ್ ನಂತರ ಚೇತರಿಕೆಗೆ ಹಲವಾರು ಮಾರ್ಗಗಳನ್ನು ಕಂಡುಕೊಂಡ ಪರಿಣಾಮ ಈ ಸಾಧನೆಯಾಗಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ