ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಶುಕ್ರವಾರ ಕೊಲ್ಲೂರು ದೇವಸ್ಥಾನಕ್ಕೆ (Kollur Temple) ಭೇಟಿ ನೀಡುತ್ತಿರುವ ಹಿನ್ನೆಲೆ ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ.
ಜೂನ್ 12ರಂದು ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದಲ್ಲಿ, ದೇವಸ್ಥಾನದ ಸುತ್ತಮುತ್ತಲು ಬಿಗಿ ಬಂದೋಬಸ್ತು ಕಲ್ಪಿಸಲಾಗಿದೆ. ವಿಜಯ್ ದೇವಸ್ಥಾನ ಭೇಟಿ ಬಳಿಕ ಹಿಂತಿರುಗಲಿದ್ದಾರೆ. ಯಾವುದೇ ಸಾರ್ವಜನಿಕ ಭೇಟಿಯ ಕಾರ್ಯಕ್ರಮ ಇಲ್ಲ ಎಂದು ಪೊಲೀಸ್ ಇಲಾಖೆ ನಾಗರಿಕರು ಹಾಗೂ ಭಕ್ತರಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಉಡಾನ್ ಯೋಜನೆಯಲ್ಲಿ ಬೆಂಗಳೂರು – ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರಕ್ಕೆ ಎಂ.ಬಿ ಪಾಟೀಲ್ ಪತ್ರ
ವಾಹನ ಸಂಚಾರದ ಕಾನ್ವಾಯ್ ಹಾದಿ, ಪ್ರವೇಶ ದ್ವಾರ ಅಥವಾ ದೇವಸ್ಥಾನದ ಆವರಣದಲ್ಲಿ ಗುಂಪು ಸೇರಬಾರದು, ಜನಸಂದಣಿ ಮಾಡಬಾರದು. ವಿಶೇಷ ಬಂದೋಬಸ್ತು ಇರುವುದರಿಂದ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಭಕ್ತಾದಿಗಳು ದರ್ಶನ ತಪ್ಪಿಸುವುದು ಸೂಕ್ತ. ತಮಿಳುನಾಡು ಸಿಎಂ ಭೇಟಿ ಹಿನ್ನೆಲೆಯಲ್ಲಿ ದರ್ಶನದ ವೇಳೆ ಅನಾನುಕೂಲವಾಗಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ದೀದಿ ನಿಮಗೆ ಅಭಿಷೇಕ್ ಬ್ಯಾನರ್ಜಿ ಬೇಕೋ, ನಾವು ಬೇಕೋ ಆರಿಸಿಕೊಳ್ಳಿ – ಕಲ್ಯಾಣ್ ಬ್ಯಾನರ್ಜಿ ಗರಂ
