ತೆಲುಗು ಸಿನಿಮಾ ರಂಗದಲ್ಲಿ ರಶ್ಮಿಕಾ ಮಂದಣ್ಣ ನೆಲೆಯೂರಿದ ನಂತರ, ಅವರು ಕರ್ನಾಟಕಕ್ಕೆ ಬರುವುದು ತೀರಾ ಅಪರೂಪವಾಗಿದೆ. ಕನ್ನಡದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಕಾರಣಕ್ಕಾಗಿ ಅವರು ಬೆಂಗಳೂರು ಮುಖ ನೋಡಿಯೇ ತುಂಬಾ ದಿನವಾಗಿದೆ. ಈ ಮಧ್ಯ ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ರಶ್ಮಿಕಾ ಕೊಡಗಿಗೆ ಬಂದಿದ್ದಾರೆ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!
Advertisement
ಮದುವೆಗೆ ಬರುವುದಕ್ಕಾಗಿ ಅವರು ಬೆಳಗ್ಗೆ ನಾಲ್ಕು ಗಂಟೆಯ ಫ್ಲೈಟ್ ಗೆ ಬುಕ್ ಮಾಡಿದ್ದರು. ಆದರೆ, ಫ್ಲೈಟ್ ಬರುವುದಕ್ಕೆ ತಡವಾಗಿದೆ. ಇನ್ನೇನು ಮದುವೆ ಮಿಸ್ ಆಗಿ ಬಿಡುತ್ತದೆ ಎಂಬ ಒದ್ದಾಟದ ನಡುವೆಯೂ ಕಾಯ್ದು, ಫ್ಲೈಟ್ ಹತ್ತಿಕೊಂಡು ಬಂದು ಸ್ನೇಹಿತೆ ರಾಗಿಣಿ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದಾರಂತೆ. ಅದನ್ನು ಅವರು ಇನ್ಸ್ಟಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ
Advertisement
Advertisement
ಮದುವೆಯಲ್ಲಿ ಪಾಲ್ಗೊಂಡಿದ್ದಷ್ಟೇ ಅಲ್ಲ, ತನ್ನ ಬಾಲ್ಯ ಸ್ನೇಹಿತೆಯರ ಜೊತೆ ಕ್ಷಣ ಹೊತ್ತು ಕಳೆದಿದ್ದಾರೆ. ಕೊಡಗಿನ ಸಾಂಪ್ರದಾಯಕ ಉಡುಗೆ ತೊಟ್ಟು ಸಂಭ್ರಮಿಸಿದ್ದಾರೆ. ಸ್ನೇಹಿತೆಯರ ಜೊತೆಗಿನ ಫೋಟೋಗಳನ್ನೂ ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!
Advertisement
ಸದ್ಯ ತಮಿಳು, ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಈ ನಡುವೆ ಬಿಡುವು ಮಾಡಿಕೊಂಡು ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಂಡಿದ್ದರ ಕುರಿತು ಅಭಿಮಾನಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಈ ನೆಪದಲ್ಲಾದರೂ ನೀವು ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.