1. ರವೆ ಉತ್ತಪ್ಪ
ರವೆಯನ್ನು ನೆನೆಸಿಟ್ಟು ರಾತ್ರಿ ರುಬ್ಬಿಕೊಂಡು ಮಾರನೇ ದಿನ ಬೆಳಿಗ್ಗೆ ಈರುಳ್ಳಿ, ಟೊಮೆಟೊ ಮತ್ತು ದಪ್ಪ ಮೆಣಸಿನಕಾಯಿಯಂತಹ ಕತ್ತರಿಸಿದ ತರಕಾರಿಗಳನ್ನು ಹಾಕಿ ದೋಸೆ ರೀತಿ ಮಾಡಿಕೊಂಡರೆ ರವೆ ಉತ್ತಪ್ಪ (Rave Uttappa) ರೆಡಿ.

2. ರವೆ ವೆಜಿಟೇಬಲ್ ಟೋಸ್ಟ್
ರವೆ, ಮೊಸರು ಮತ್ತು ನುಣ್ಣಗೆ ಕತ್ತರಿಸಿದ ತರಕಾರಿಗಳನ್ನು ಒಟ್ಟಿಗೆ ಮಿಶ್ರಣ ಮಾಡಿ, ಅದನ್ನು ಬ್ರೆಡ್ ಚೂರುಗಳ ಮೇಲೆ ಸವರಿ, ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡುವ ಮೂಲಕ ತಯಾರಿಸಲಾಗುತ್ತದೆ.

3. ರವೆ ಇಡ್ಲಿ
ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು ಮತ್ತು ಮೆಣಸಿನಕಾಯಿ ಒಗ್ಗರಣೆ ಮಾಡಿ, ನಂತರ ರವೆ ಸೇರಿಸಿ ಘಮ ಬರುವವರೆಗೆ ಹುರಿದು ತಣ್ಣಗಾಗಿಸಿ. ಈ ರವೆಗೆ ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 15 ನಿಮಿಷ ನೆನೆಯಲು ಬಿಡಿ. ಇಡ್ಲಿ ಬೇಯಿಸುವ ಮುನ್ನ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಈ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಾಕಿ, ಇಡ್ಲಿ ಪಾತ್ರೆಯಲ್ಲಿ 10-12 ನಿಮಿಷ ಹಬೆಯಲ್ಲಿ ಬೇಯಿಸಿದರೆ ಬಿಸಿಬಿಸಿಯಾದ ಮೃದು ರವೆ ಇಡ್ಲಿ (Rave Idli) ಸಿದ್ಧವಾಗುತ್ತದೆ.

4. ರವೆ ಪಡ್ಡು
ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು ಮತ್ತು ಮೆಣಸಿನಕಾಯಿ ಒಗ್ಗರಣೆ ಮಾಡಿ, ನಂತರ ರವೆ ಸೇರಿಸಿ ಘಮ ಬರುವವರೆಗೆ ಹುರಿದು ತಣ್ಣಗಾಗಿಸಿ. ಈ ರವೆಗೆ ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಮೊಸರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 15 ನಿಮಿಷ ನೆನೆಯಲು ಬಿಡಿ. ಇಡ್ಲಿ ಬೇಯಿಸುವ ಮುನ್ನ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಈ ಹಿಟ್ಟನ್ನು ಎಣ್ಣೆ ಸವರಿದ ಪಡ್ಡಿನ ಮಣೆಗೆ ಹಾಕಿ, 10-12 ನಿಮಿಷ ಬೇಯಿಸಿದರೆ ಬಿಸಿಬಿಸಿಯಾದ ಮೃದು ರವೆ ಪಡ್ಡು (rave paddu) ಸಿದ್ಧವಾಗುತ್ತದೆ.

5. ರವೆ ದೋಸೆ
ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಸಮಪ್ರಮಾಣದಲ್ಲಿ ಹಾಕಿ. ಇದಕ್ಕೆ ಜೀರಿಗೆ, ಕಾಳುಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಶುಂಠಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಅಗತ್ಯ ನೀರು ಅಥವಾ ಮಜ್ಜಿಗೆಯನ್ನು ಹಾಕಿ, ಹಿಟ್ಟನ್ನು ತುಂಬಾ ತೆಳ್ಳಗೆ ಕಲಸಿ, 20 ನಿಮಿಷ ನೆನೆಯಲು ಬಿಡಿ. ದೋಸೆ ಹಂಚು ಚೆನ್ನಾಗಿ ಕಾದ ನಂತರ, ಹಿಟ್ಟನ್ನು ಕೈಯಿಂದ ಅಥವಾ ಲೋಟದಿಂದ ಹಂಚಿನ ಸುತ್ತಲೂ ಚಿಮುಕಿಸಿದಂತೆ ತೆಳ್ಳಗೆ ಸುರಿಯಿರಿ. ದೋಸೆಯ ಸುತ್ತಲೂ ಎಣ್ಣೆ ಅಥವಾ ತುಪ್ಪ ಹಾಕಿ, ಮಧ್ಯಮ ಉರಿಯಲ್ಲಿ ದೋಸೆ ಗರಿಗರಿಯಾಗಿ ಮತ್ತು ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ರವೆ ದೋಸೆ ಸಿದ್ಧವಾಗುತ್ತದೆ.
