ತೆಲುಗಿನ (Tollywood) ಖ್ಯಾತ ನಟ ನರೇಶ್ (Naresh) ಮತ್ತು ಅವರ ಪತ್ನಿ ರಮ್ಯಾ (Ramya Raghupathi) ರಗಳೆ ಮುಗಿಯುವಂತೆ ಕಾಣುತ್ತಿಲ್ಲ. ಪತ್ನಿಯಿಂದ ತಮಗೆ ಕಿರುಕುಳ ಆಗುತ್ತಿದೆ. ಬೇಗ ಡಿವೋರ್ಸ್ ಕೊಡಿ ಎಂದು ಮೊನ್ನೆಯಷ್ಟೇ ನಟ ನರೇಶ್ ಕೋರ್ಟ್ ಗೆ ಮೊರೆ ಹೋಗಿದ್ದರು. ಇದೀಗ ನಿನ್ನೆ ಪತ್ರಿಕಾಗೋಷ್ಠಿ ಮಾಡಿ, ರಮ್ಯಾ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದಾರೆ. ರಮ್ಯಾರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳುವುದರ ಜೊತೆಗೆ ಆಕೆಗೆ ಕ್ರಿಮಿನಲ್ ಜೊತೆ ಒಡನಾಟ ಇರುವುದಾಗಿ ಮಾತನಾಡಿದ್ದಾರೆ.
Advertisement
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ನರೇಶ್, ‘ಜೀವನದಲ್ಲಿ ನನಗೆ ಬೇಸರವಾಗಿ ಸನ್ಯಾಸತ್ವ ತಗೆದುಕೊಳ್ಳಬೇಕು ಎಂದು ಹೊರಟಾಗ ಭೇಟಿಯಾದವರು ರಮ್ಯಾ. ತಮಗೆ ಶುಗರ್ ಇದೆ, ನನ್ನಂಥವಳನ್ನು ಯಾರು ಮದುವೆ ಆಗುತ್ತಾರೆ ಎಂದು ಕಣ್ಣೀರಿಟ್ಟಳು. ಅಲ್ಲದೇ, ನನ್ನ ತಾಯಿಯು ಕೂಡ ಆಕೆಯ ಬಗ್ಗೆ ಒಲವು ತೋರಿದ್ದರಿಂದ ಮದುವೆಯಾದೆ. ಆನಂತರದ ರಮ್ಯಾನೇ ಬೇರೆ ಇದ್ದಳು. ಕಂಠಪೂರ್ತಿ ಕುಡಿದು ಬರುತ್ತಿದ್ದಳು. ಗಲಾಟೆ ಮಾಡುತ್ತಿದ್ದಳು’ ಎಂದೆಲ್ಲ ಆರೋಪಿಸಿದ್ದಾರೆ. ಇದನ್ನೂ ಓದಿ: ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್
Advertisement
Advertisement
ಮುಂದುವರೆದು ಮಾತನಾಡಿದ ಅವರು, ‘ಆಕೆ ಮಾಡಿದ ಎಲ್ಲ ರಂಪಾಟವನ್ನೂ ಸಹಿಸಿಕೊಂಡು ಬಂದೆ. ಬ್ಯುಸಿನೆಸ್ ಮಾಡುತ್ತೇನೆ ಅಂದ್ಳು. ಅದಕ್ಕೂ ಸಪೋರ್ಟ್ ಮಾಡಿದೆ. ಬ್ಯುಸಿನೆಸ್ ಹೆಸರಲ್ಲಿ ಓಡಾಡೋಕೆ ಶುರು ಮಾಡಿದಳು. ಹದಿನೈದು ದಿನ ಮಾತ್ರ ಮನೆಯಲ್ಲಿ ಇರುತ್ತಿದ್ದಳು. ಹೇಳ್ತಾ ಹೋದರೆ ತುಂಬಾನೇ ಇದೆ. ಹೀಗಾಗಿ ರಮ್ಯಾ ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ನಾನೂ ಹೇಳಬೇಕಾಗಿದ್ದು ತುಂಬಾ ಇದೆ. ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಎಚ್ಚರಿಕೆಯನ್ನೂ ನರೇಶ್ ಕೊಟ್ಟಿದ್ದಾರೆ.
Advertisement
ರಮ್ಯಾ ಅವರು ಕ್ರಿಮಿನಲ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದೂ ನರೇಶ್ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಅನ್ನು ಟ್ರ್ಯಾಪ್ ಮಾಡಿಸಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ನಾನು ಯಾರ ಜೊತೆ ಬೇಕಾದರೂ ಇರುತ್ತೇನೆ. ಅದು ನನ್ನ ಸ್ವಾತಂತ್ರ್ಯ. ಆದರೆ, ತೊಂದರೆ ಮಾಡುವುದನ್ನು ನಾನು ಸಹಿಸಲ್ಲ. ಪವಿತ್ರಾಳ ಮೇಲೆ ಸ್ಟ್ರಿಂಗ್ ಆಪರೇಷನ್ ಮಾಡಿಸ್ತೀಯಾ, ಇದೇ ರೀತಿ ಮುಂದುವರೆದರೆ ಬೇರೆ ರೀತಿಯಲ್ಲೇ ನಾನು ಉತ್ತರ ಕೊಡುತ್ತೇನೆ’ ಎಂದು ನರೇಶ್ ಎಚ್ಚರಿಕೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k