Connect with us

Bengaluru City

ಅದು ಫೇಕ್ ವೀಡಿಯೋ, ರಾಜೀನಾಮೆ ನೀಡಲ್ಲ: ರಮೇಶ್ ಜಾರಕಿಹೊಳಿ

Published

on

ಬೆಂಗಳೂರು:  ಅದು ಫೇಕ್ ವಿಡಿಯೋವಾಗಿದ್ದು ನಾನೂ ತಪ್ಪೇ ಮಾಡಿಲ್ಲ, ಯಾಕೆ ರಾಜೀನಾಮೆ ನೀಡಬೇಕು? ಹೀಗೆಲ್ಲ ವಿಚಾರ ಮಾಡಿದರೆ ದಿನಕ್ಕೊಂದು ವಿಕೆಟ್ ಬೀಳುತ್ತವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಮುಖ್ಯಮಂತ್ರಿ, ಹೈ ಕಮಾಂಡ್ ಜೊತೆ ಮಾತನಾಡಿದ್ದೇನೆ. ನಾನು ತಪ್ಪು ಮಾಡಿಲ್ಲ, ಆ ಯುವತಿ ಯಾರೆಂದು ಗೊತ್ತಿಲ್ಲ. ರಾಜೀನಾಮೆ ನೀಡುವುದಿಲ್ಲ. ಮೊದಲ ಬಾರಿಗೆ ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿದ್ದೇನೆ. ದಯವಿಟ್ಟು ಸಹಕರಿಸಿ, ತನಿಖೆ ನಡೆಯಲಿ, ಸತ್ಯ ಬೆಳಕಿಗೆ ಬರುತ್ತೆ ಎಂದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಾನು ತಪ್ಪು ಮಾಡಿದಂತಾಗುತ್ತದೆ. ಹೀಗಾಗಿ ರಾಜೀನಾಮೆ ಕೊಡಲ್ಲ. ನಾನು ತಪ್ಪು ಮಾಡಿಲ್ಲ, ಆ ಯುವತಿಯನ್ನೇ ನೋಡಿಲ್ಲ. ವಿಧಾನಸಭೆ ಉಪಚುನಾವಣೆಯಲ್ಲಿ ಸಹ ಇದೇ ರೀತಿ ಷಡ್ಯಂತ್ರ ನಡೆಯಿತು. ಇದನ್ನು ಊಹಿಸಲು ಸಹ ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಯಲಿ, ತಪ್ಪಿತಸ್ಥನೆಂದು ತಿಳಿದರೆ ಯಾವುದೇ ಶಿಕ್ಷೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿಗಳೊಂದಿಗೆ, ಹೈ ಕಮಾಂಡ್ ಜೊತೆ ಈಗಾಗಲೇ ಚರ್ಚೆ ನಡೆಸಿದ್ದೇನೆ.  ಇದೇ ರೀತಿಯ ಮತ್ತೊಂದು ಫೋಟೋ ಬಂದಿದೆ. ಹೀಗಿರುವಾಗ ಹೇಗೆ ಒಪ್ಪಲು ಸಾಧ್ಯ, ಇಂದಿನ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು. ಏನು ಬೇಕಾದರೂ ಫೇಕ್ ಮಾಡಬಹುದು. ಇದು ಎಲ್ಲಿ ಆಗಿದೆ, ಏನು ಆಗಿದೆ ಎಂಬುದೇ ಗೊತ್ತಿಲ್ಲ ಎಂದು ತಿಳಿಸಿದರು.

ಕಾನೂನು ಹೋರಾಟದ ಬಗ್ಗೆ ಈಗಾಗಲೇ ನಮ್ಮ ವಕೀಲರ ಜೊತೆ ಚರ್ಚಿಸಿದ್ದೇನೆ. ಕಾನೂನು ರೀತಿ ಉತ್ತರ ನೀಡುತ್ತೇನೆ. 21 ವರ್ಷದ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ ಎಂದರು. ಉಪ ಚುನಾವಣೆಯ ಸಂದರ್ಭದಲ್ಲಿ ನನ್ನ ವಿರುದ್ದ ಷಡ್ಯಂತ್ರ ನಡೆದಿದೆ ಎಂದರು.

Click to comment

Leave a Reply

Your email address will not be published. Required fields are marked *