– ಜುಲೈ 11ರ ಸಭೇಲಿ ಹೊಸ ಪ್ರಧಾನ ಕಾರ್ಯದರ್ಶಿ ನೇಮಕ
– ಚಂಪತ್ ರಾಯ್, ಅನಿಲ್ ಮಿಶ್ರಾಗೆ ತನಿಖೆಯ ಬಿಸಿ?
ಲಕ್ನೋ: ರಾಮ ಮಂದಿರದ ದೇಣಿಗೆ ದುರುಪಯೋಗ ವಿವಾದ (Ram Mandir Donation Row) ಬಗೆದಷ್ಟೂ ಬಯಲಾಗುತ್ತಿದೆ. ದೇಣಿಗೆ ಲೂಟಿಯಲ್ಲಿ ಇನ್ನಷ್ಟು ಮಂದಿ ಸಿಲುಕೋ ಸಾಧ್ಯತೆ ಇದೆ. ಶೀಘ್ರದಲ್ಲೇ ದೊಡ್ಡವರ ವಿರುದ್ಧ ಮತ್ತೊಂದು ಎಫ್‌ಐಆರ್ (FIR) ದಾಖಲಾಗುವ ಸಾಧ್ಯತೆಯಿದೆ.
ದೇಣಿಗೆಯಲ್ಲಿ ಪ್ರಮುಖವಾಗಿ ದೊಡ್ಡ ಕೈವಾಡ ಇರೋದೇ ಟಿನ್ನು ಯಾದವ್‌ನದ್ದು ಎನ್ನಲಾಗಿದೆ. ಈ ಟಿನ್ನು ಯಾದವ್, ಮನೀಶ್ ಯಾದವ್, ಲವಕುಶ್ ಮಿಶ್ರಾ ಅನುಕಲ್ಪ್ ಮಿಶ್ರಾಗೆ ಸಿಸಿ ಕ್ಯಾಮರಾದ ಇಂಚಿಂಚೂ ಮಾಹಿತಿಗಳು ಗೊತ್ತಿದ್ದವು. ಹೀಗಾಗಿ ಕೆಲವೊಮ್ಮೆ ಸಿಸಿಟಿವಿ ಸ್ವಿಚ್ ಆಫ್ ಮಾಡಿ ಹಣ ಎಣಿಕೆ ಮಾಡುವುದು. ಕ್ಯಾಮರಾಗೆ ಅಡ್ಡವಾಗಿ ನಿಂತು ಹಣ ಬಟ್ಟೆಯೊಳಗೆ ಬಚ್ಚಿಡುವುದು ಮಾಡುತ್ತಿದ್ದರು. ಆದ್ರೆ ಹಣ ಎಣಿಕೆ ಕೋಣೆಯ ರಹಸ್ಯ ಕ್ಯಾಮರಾದಲ್ಲಿ ಈ ಕಳ್ಳತನ ಬಯಲಾಗಿದೆ.

ಪ್ರಕರಣದಲ್ಲಿ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ. ಜುಲೈ 11ರಂದು ಟ್ರಸ್ಟ್ ಸಭೆ ನಡೆಯಲಿದ್ದು, ನೂತನ ಪ್ರಧಾನ ಕಾರ್ಯದರ್ಶಿಯನ್ನ ನೇಮಿಸಲಾಗುತ್ತೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Top Updates | ರಾಮಮಂದಿರದ 7 ಕೋಟಿ ದೇಣಿಗೆ ಕಳ್ಳತನ – 70 ಬಾರಿ ಲೂಟಿ, ಸಿಎಂ ಯೋಗಿ ಎಚ್ಚರಿಕೆ
ಇನ್ನು ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಕಿಡಿ ಕಾರಿದ್ದಾರೆ. ನಮಗೆ ಬಿಜೆಪಿ ಮುಕ್ತ ರಾಮ ಬೇಕು.. ಈ ವಿಚಾರವಾಗಿ ಶಿವಸೇನಾ ಹೋರಾಟ ಮಾಡಲಿದೆ ಎಂದಿದ್ದಾರೆ. ಬಿಜೆಪಿ ಹಿಂದೂಗಳ ಭಾವನೆ ಜೊತೆ ಚೆಲ್ಲಾಟ ಆಡುತ್ತಿದೆ. ಈ ಮೂಲಕ ದೇಶದ ಜನರಿಗೆ ದ್ರೋಹ ಮಾಡಿದೆ. ಮಂದಿರ ಲೂಟಿ ಮಾಡುವ ನಿಮ್ಮ ಹಿಂದುತ್ವ ತಿರಸ್ಕರಿಸುತ್ತೇವೆ ಎಂದಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ, 5 ವರ್ಷದಲ್ಲಿ 500 ಕೋಟಿ ಹೊಡೆದಿದ್ದಾರೆ. ನಾನು ತಿನ್ನಲ್ಲ, ತಿನ್ನಲು ಬಿಡಲ್ಲ ಎಂದು ರಾಮನ ಹೆಸರಲ್ಲೂ ದುಡ್ಡು ಹೊಡೆದಿದ್ದಾರೆ ಅಂತ ಟೀಕಿಸಿದ್ದಾರೆ. ಇದನ್ನೂ ಓದಿ:ದಿನಕ್ಕೆ 2 ಶಿಫ್ಟ್, 40 ಸಿಬ್ಬಂದಿ ಬಳಕೆ – ರಾಮನ ದೇಣಿಗೆ ಲೆಕ್ಕ ಹೇಗೆ ನಡೆಯುತ್ತೆ?
