Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ನೋಯ್ಡಾ ಕಾರ್ಮಿಕರ ಪ್ರತಿಭಟನೆಗೆ ರಾತ್ರೋ ರಾತ್ರಿ ಪ್ಲ್ಯಾನ್‌ – ಪಾಕಿಸ್ತಾನ ಲಿಂಕ್‌ ಬಗ್ಗೆ ತನಿಖೆ, 300 ಜನ ಅರೆಸ್ಟ್‌
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನೋಯ್ಡಾ ಕಾರ್ಮಿಕರ ಪ್ರತಿಭಟನೆಗೆ ರಾತ್ರೋ ರಾತ್ರಿ ಪ್ಲ್ಯಾನ್‌ – ಪಾಕಿಸ್ತಾನ ಲಿಂಕ್‌ ಬಗ್ಗೆ ತನಿಖೆ, 300 ಜನ ಅರೆಸ್ಟ್‌

Latest

ನೋಯ್ಡಾ ಕಾರ್ಮಿಕರ ಪ್ರತಿಭಟನೆಗೆ ರಾತ್ರೋ ರಾತ್ರಿ ಪ್ಲ್ಯಾನ್‌ – ಪಾಕಿಸ್ತಾನ ಲಿಂಕ್‌ ಬಗ್ಗೆ ತನಿಖೆ, 300 ಜನ ಅರೆಸ್ಟ್‌

Public TV
Last updated: April 14, 2026 12:48 pm
Public TV
Share
3 Min Read
Noida Protest 1
SHARE

– ವಾಟ್ಸಪ್‌ ಗ್ರೂಪ್‌ ರಹಸ್ಯ ಮತ್ತು ಪ್ರಚೋಧನಕಾರಿ ಭಾಷಣ!

ಲಕ್ನೋ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿವಿಧ ಖಾಸಗಿ ಕಂಪನಿ ನೌಕರರು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಸುತ್ತಿದ್ದ ಪ್ರತಿಭಟನೆ (Noida Protest) ಕುರಿತು ಸ್ಫೋಟಕ ರಹಸ್ಯಗಳು ಹೊರ ಬೀಳುತ್ತಿವೆ. ರಾತ್ರೋ ರಾತ್ರಿ ಕಾರ್ಮಿಕರ ಪ್ರತಿಭಟನೆ ರೂಪುಗೊಂಡಿದ್ದು ಹೇಗೆ? ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ಪಡೆದುಕೊಂಡಿದ್ದು ಹೇಗೆ? ಅನ್ನೋ ರಹಸ್ಯ ಬೆಳಕಿಗೆ ಬಂದಿದೆ.

ನೋಯ್ಡಾದ ಕಾರ್ಮಿಕರ ಪ್ರತಿಭಟನೆ (Workers’ protest) ಇಂದೂ ಕೂಡ ಮುಂದುವರಿದಿದೆ. 2 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ 3ನೇ ದಿನವಾದ ಸೋಮವಾರ (ಏ.13) ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ವಿವಿಧ ಕಾರ್ಖಾನೆಗಳ 40,000 ಕ್ಕೂ ಹೆಚ್ಚು ಕಾರ್ಮಿಕರು 80 ಕ್ಕೂ ಹೆಚ್ಚು ಸ್ಥಳಗಳಲ್ಲಿ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಪ್ರಮುಖ ರಸ್ತೆಗಳನ್ನ ತಡೆದು ಪ್ರತಿಭಟಿಸಿದ್ರು, ಕಲ್ಲು ತೂರಾಟ ನಡೆಸಿ, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಘಟನೆ ಬಳಿಕ ಹಿಂಸಾತ್ಮಕ ಕೃತ್ಯ ಎಸಗಿದವರನ್ನ ಬಂಧಿಸಿ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸರ ತನಿಖೆ ವೇಳೆ ಸ್ಫೋಟಕ ರಹಸ್ಯಗಳು ಹೊರಬಿದ್ದಿವೆ.

Noida Protest

ವಾಟ್ಸಪ್‌ ಗ್ರೂಪ್‌: ಪ್ರತಿಭಟನೆಗೆ ರಾತ್ರೋ ರಾತ್ರಿ ಪ್ಲ್ಯಾನ್‌
ಪೊಲೀಸರು (Noida Police) ಈವರೆಗೆ ನಡೆಸಿರುವ ತನಿಖೆ ಪ್ರಕಾರ, ವಾಟ್ಸಪ್‌ ಗ್ರೂಪ್‌ ಮಾಡಿ ಕ್ಯೂಆರ್‌ ಕೋಡ್‌ ಮೂಲಕ ಎಲ್ಲರನ್ನ‌ ಗುಂಪಿಗೆ ಸೇರಿಸಲಾಯಿತು. ವಿವಿಧ ಕಾರ್ಮಿಕ ಸಂಘಟನೆಗಳ ಮೂಲಕ ಸಂದೇಶಗಳನ್ನು ಅದರಲ್ಲಿ ಕಳಿಸಲಾಯಿತು. ಹಲವಾರು ಗುಂಪುಗಳಿದ್ದವು, ಅದರಲ್ಲಿ ಒಂದು ಗುಂಪಿಗೆ ʻಕಾರ್ಮಿಕ ಚಳವಳಿʼ ಎಂದು ಹೆಸರಿಡಲಾಗಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನ ತೀವ್ರಗೊಳಿಸಲು ಪ್ರಚೋದನಕಾರಿ ಭಾಷಣ, ಸಂದೇಶಗಳನ್ನ ಈ ಗ್ರೂಪ್‌ಗಳಲ್ಲಿ ಹರಿಬಿಡಲಾಯಿತು. ಮಾರನೇ ದಿನವೇ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇದನ್ನೂ ಓದಿ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ ನೌಕರರ ಪ್ರತಿಭಟನೆ ವೇಳೆ ಹಿಂಸಾಚಾರ – ಪೊಲೀಸರ ವಾಹನಗಳಿಗೆ ಬೆಂಕಿ

300 ಜನ ಅರೆಸ್ಟ್, 100 ಮಂದಿ ವಶಕ್ಕೆ
ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಹಿಂಸಾತ್ಮಕ ಕೃತ್ಯ ಎಸಗಿದ 300 ಜನರನ್ನ ಬಂಧಿಸಲಾಗಿದೆ. ಜೊತೆಗೆ 100 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಹೆಚ್ಚಿನವರನ್ನ ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಆಕ್ರೋಶ – ಹಳೆಯ ವೈಷಮ್ಯ ಮತ್ತೆ ಹೊತ್ತಿ ಉರಿತಿದ್ಯಾ?

Noida Protest 3

ಪಾಕ್‌ ಲಿಂಕ್‌ ಬಗ್ಗೆ ತನಿಖೆ
ಇನ್ನೂ ಪ್ರತಿಭಟನೆ ವೇಳೆ ಕಾರ್ಮಿಕರು ಚದುರಿದ ನಂತರ ಹೊರಗಿನ ಕೆಲ ವ್ಯಕ್ತಿಗಳು ಹಿಂಸಾಚಾರವನ್ನ ಪ್ರಚೋದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ಅನೇಕರನ್ನ ಬಂಧಿಸಲಾಗಿತ್ತು. ಪ್ರತಿಭಟನೆ ಹಿಂಸಾಚಾರದ ವೇಳೆ ಹೊಸ ಮುಖಗಳು ಕಂಡುಬಂದಿದೆ. ಹೀಗಾಗಿ ಪಾಕ್‌ ಸಂಪರ್ಕದ (WhatsApp Groups) ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ನಕ್ಸಲ್‌ ಚಳವಳಿಯ ಅಂತ್ಯ – ʻರೆಡ್‌ ಕಾರಿಡಾರ್‌ʼ ಇತಿಹಾಸದ ಇನ್‌ಸೈಡ್ ಸ್ಟೋರಿ!

Noida Protest 2

ಸಮಯ ಇಳಿಕೆ & 20,000 ವೇತನ ಹೆಚ್ಚಳಕ್ಕೆ ಆಗ್ರಹ
ಸದ್ಯ ನೋಯ್ಡಾ ಕಾರ್ಖಾನೆಗಳಲ್ಲಿ ಕಾರ್ಮಿಕರು ನಿತ್ಯ 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 11,000 ರಿಂದ 15,000 ರೂ. ಮಾತ್ರ ಗಳಿಸುತ್ತಿದ್ದಾರೆ. ಕಂಪನಿಗಳು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಕನಿಷ್ಠ ವೇತನ ನಿಯಮಗಳನ್ನೂ ಪಾಲಿಸುತ್ತಿಲ್ಲ. ಇನ್ನೂ ಕೆಲವರು 2 ಪಾಳಿಯಲ್ಲಿ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಹೀಗಾಗಿ ಕೆಲಸದ ಸಮಯ 8 ಗಂಟೆಗೆ ನಿಗದಿಪಡಿಸಬೇಕು, ವೇತನ 20 ರಿಂದ 25 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

TAGGED:Noida ProtestNoida WorkersPakistan Linkstones pelteduttar pradeshVehicles FireViolentWhatsup Gropಉತ್ತರ ಪ್ರದೇಶಕಾರ್ಮಿಕರ ಪ್ರತಿಭಟನೆನೋಯ್ಡಾ ಪ್ರತಿಭಟನೆಯೋಗಿ ಆದಿತ್ಯನಾಥ್
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

IPL MI LSG
Cricket

ಲಕ್ನೋ ವಿರುದ್ಧ ಮುಂಬೈಗೆ 6 ವಿಕೆಟ್‌ಗಳ ಜಯ

Public TV
ByPublic TV
55 minutes ago
Vijay 2
Latest

8 ಗ್ರಾಂ ಚಿನ್ನ, 6 ಸಿಲಿಂಡರ್‌ ಉಚಿತ, ಪದವೀಧರರಿಗೆ 4,000 ಭತ್ಯೆ – ʻವಿಜಯʼ ಭರವಸೆಯತ್ತ ಜನರ ಚಿತ್ತ!

Public TV
ByPublic TV
60 minutes ago
Himanta Sarmas BJP To Win 70 80 Of Assams 126 Seats NDA Sweep Exit Poll
Latest

WE ARE BACK, back with a BANG! – ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಜಯ – 3ನೇ ಅವಧಿಗೂ ಶರ್ಮಾ ಸಿಎಂ ಆಗೋದು ಫಿಕ್ಸ್‌

Public TV
ByPublic TV
1 hour ago
SUVENDU ADHIKARI
Latest

ಬಂಗಾಳದಲ್ಲಿ ಬಿಜೆಪಿ ಗೆಲುವು, ಟಿಎಂಸಿ ಸೋಲಿಗೆ ಕಾರಣಗಳೇನು?

Public TV
ByPublic TV
1 hour ago
Modi 3
Latest

Assembly Elections Results 2026 | ಪುದುಚೇರಿಯಲ್ಲಿ ಎನ್‌ಡಿಎಗೆ ಮತ್ತೆ ಅಧಿಕಾರ

Public TV
ByPublic TV
2 hours ago
Mamata Banerjee West Bengal Suvendu Adhikari
Latest

ಮಮತಾಗೆ 15,000ಕ್ಕೂ ಹೆಚ್ಚು ಮತಗಳಿಂದ ಹೀನಾಯ ಸೋಲು – ಸುವೆಂದು ಅಧಿಕಾರಿಗೆ ಜಯ

Public TV
ByPublic TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?