ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯ ಹೊಸ್ತಿಲಲ್ಲಿದ್ದು, ಪಂಜಾಬ್ ಜನತೆಗೆ ಆಮ್ ಆದ್ಮಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಪಂಜಾಬ್‍ನಲ್ಲಿ ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರನ್ನು ಭೇಟಿಯಾದ ಅವರು, ಆಮ್ ಆದ್ಮಿ ಪಕ್ಷದ ಕೇಂದ್ರಾಡಳಿತವಾಗಿರುವ ದೆಹಲಿಗಿಂತ ಭಿನ್ನವಾಗಿ ಹಾಗೂ ಪೂರ್ಣ ರಾಜ್ಯವನ್ನು ನಡೆಸುವ ಅವಕಾಶವನ್ನು ಪಂಜಾಬ್ ಗೆಲುವು ನೀಡಿದೆ. ಈ ಕ್ರಾಂತಿಗಾಗಿ ಪಂಜಾಬ್‍ನ ಜನತೆಗೆ ಧನ್ಯವಾದವನ್ನು ತಿಳಿಸಿದರು.
Advertisement
इस इंक़लाब के लिए पंजाब के लोगों को बहुत-बहुत बधाई। pic.twitter.com/BIJqv8OnGa
— Arvind Kejriwal (@ArvindKejriwal) March 10, 2022
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್ ಅವರು ಭಗವಂತ್ ಮಾನ್ ಅವರ ಜೊತೆ ವಿಜಯದ ಸಂಕೇತ ತೋರಿಸುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು
Advertisement
Advertisement
ಮಧ್ಯಾಹ್ನ 1ಗಂಟೆಯ ಟ್ರೆಂಡ್ ಪ್ರಕಾರ ಆಪ್ 91, ಕಾಂಗ್ರೆಸ್ 17, ಶಿರೋಮಣಿ ಅಖಾಲಿ ದಳ 06, ಬಿಜೆಪಿ 2, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಮನೆಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?