ನಟಿ ಶುಭಾ ಪೂಂಜಾ ಹಾಗೂ ಪತಿ ಸುಮಂತ್ ಬಿಲ್ಲವ ಅವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದ್ದು, ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಯೂ ನಿಗದಿಯಾಗಿತ್ತು. ಆದರೆ ದಂಪತಿ ವಿಚಾರಣೆಗೆ ಗೈರಾಗಿದ್ದರು ಎನ್ನಲಾಗ್ತಿದೆ.
ಶುಭಾ ಮತ್ತು ಸುಮಂತ್ 2022ರ ಜನವರಿ ತಿಂಗಳಲ್ಲಿ ಮದುವೆಯಾಗಿದ್ದರು. ಮೇಲ್ನೋಟಕ್ಕೆ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿಯೇ ಕಂಡುಬಂದಿತ್ತು. ಆದರೆ ಕಳೆದ ಗುರುವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗಲೇ ಅವರ ನಡುವಿನ ಬಿರುಕು ಬಹಿರಂಗವಾಗಿತ್ತು. ಇದನ್ನೂ ಓದಿ: 15 ವರ್ಷಗಳ ನಂತ್ರ ʻಡೆಡ್ಲಿ ಕಿಲ್ಲರ್ʼಗೆ ಥ್ರಿಲ್ಲರ್ ಮಂಜು ಆ್ಯಕ್ಷನ್ ಕಟ್
ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ವಿಚಾರಣೆಗೆ ಗೈರಾಗಿರುವುದು ಹಾಗೂ ಆಪ್ತರ ಅಭಿಪ್ರಾಯಗಳ ಆಧಾರದ ಮೇಲೆ, ಇದೀಗ ಇಬ್ಬರೂ ದೂರಾಗುವ ಮನಸ್ಸು ಬದಲಿಸಿಕೊಂಡಿದ್ದಾರಾ ಎಂಬ ಅನುಮಾನ ಮೂಡಿದೆ.
ನಾಲ್ಕು ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಶುಭಾ-ಸುಮಂತ್ ದಂಪತಿ ಏಕಾಏಕಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಆಪ್ತರಿಗೂ ಅಚ್ಚರಿ ಮೂಡಿಸಿತ್ತು. ಆದರೆ ಇದೀಗ ಇಬ್ಬರೂ ತಮ್ಮ ನಡುವಿನ ಮನಸ್ತಾಪವನ್ನು ಬಗೆಹರಿಸಿಕೊಂಡು ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಶೀಘ್ರದಲ್ಲೇ ಇಬ್ಬರೂ ಮತ್ತೆ ಒಂದಾಗಿ ‘ಶುಭ’ ಸಂದೇಶ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್
