ಬೆಂಗಳೂರು: ನಗರದ (Bengaluru) ಹೊರವಲಯದಲ್ಲಿದ್ದ ಒಂಟಿ ಮನೆಯ ಡೋರ್ ಮುರಿದು 30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು (Gold) ಕಳ್ಳರು ದೋಚಿದ ಘಟನೆ ಕದಿರೇನಹಳ್ಳಿಯಲ್ಲಿ ನಡೆದಿದೆ.
ಅರುಣ್ ಕುಮಾರ್ ಎಂಬವರ ಮನೆಯಲ್ಲಿದ್ದ 21 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನ, ಹಾಗೂ 7 ಲಕ್ಷ ರೂ. ಮೌಲ್ಯದ 3 ಕೆಜಿ ಬೆಳ್ಳಿ ಸೇರಿದಂತೆ ರೇಷ್ಮೆ ಸೀರೆ ಸೇರಿದಂತೆ ಒಟ್ಟು 30 ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಇದನ್ನೂ ಓದಿ: ಕಾಂಟ್ಯಾಕ್ಟರ್ ಮನೆಯಲ್ಲಿ ಕಳ್ಳ ದಂಪತಿ ಕೈಚಳಕ – 25 ಲಕ್ಷ ಹಣ ಕದ್ದು ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್
ಎರಡು ದಿನದ ಹಿಂದೆ ಸಂಬಂಧಿಕರ ಮನೆಯ ಶುಭಕಾರ್ಯಕ್ಕೆ ಅರುಣ್ ಕುಮಾರ್ ದಂಪತಿ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: 18 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ – ತೆಲಂಗಾಣದ ಉನ್ನತ ಅಧಿಕಾರಿಯ ಬಂಧನ
