ಕಾರವಾರ: ದಾಂಡೇಲಿ, ಹಳಿಯಾಳ ಹೈವೆಯಲ್ಲಿ (Dandeli_Haliyal Highway) ಕೆಸರಿನಲ್ಲಿ ಲಾರಿ ಸಿಲುಕಿದ್ದ ಪರಿಣಾಮ 3 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಂಗಳೂರಿನಿಂದ (Mangaluru) ದಾಂಡೇಲಿ ಕಾಗದ ಕಾರ್ಖಾನೆಗೆ ಲಾರಿ ತೆರಳುತ್ತಿತ್ತು. ಈ ವೇಳೆ ಅಜ್ಗಾವ್ ಗ್ರಾಮದ ಬಳಿ ಎದುರಿಗೆ ಬಂದ ವಾಹನಕ್ಕೆ ದಾರಿ ಬಿಡುವಾಗ ರಸ್ತೆಯ ಕೆಸರಿನಲ್ಲಿ ಲಾರಿ ಸಿಲುಕಿದೆ. ಇದರಿಂದ ಮೂರು ಗಂಟೆಯಿಂದ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಹೆದ್ದಾರಿಯಲ್ಲೇ ನೂರಾರು ವಾಹನಗಳು ನಿಂತಿವೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭೀಕರ ದುರಂತ – ಟಾಟಾ ಸುಮೋ ಮೇಲೆ ಬಂಡೆ ಬಿದ್ದು 13 ಮಂದಿ ದುರ್ಮರಣ
ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಂಚಾರ ಸುಗಮಗೊಳಿಸಲು ಪರದಾಡುತ್ತಿದ್ದಾರೆ. ಕ್ರೇನ್ ತರಿಸಿ ಲಾರಿ ಎತ್ತಿಸುವ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಗದಗ | ನೇಣು ಬಿಗಿದ ಸ್ಥಿತಿಯಲ್ಲಿ ಪದವೀಧರೆಯ ಶವ ಪತ್ತೆ – ಕೊಲೆ ಶಂಕೆ
