ನವದೆಹಲಿ: ದೆಹಲಿಯ ಸತ್ಯ ನಿಕೇತನದಲ್ಲಿ (Satya Niketan) ವಸತಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಪ್ರಕರಣ ಸಂಬಂಧ ಅನಧಿಕೃತ ನಿರ್ಮಾಣಗಳನ್ನು ನಿಭಾಯಿಸುವಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೂವರು ಕಟ್ಟಡ ಇಲಾಖೆಯ ಎಂಜಿನಿಯರ್‌ಗಳನ್ನು (Engineers) ದೆಹಲಿ ಮಹಾನಗರ ಪಾಲಿಕೆ ಅಮಾನತುಗೊಳಿಸಿದೆ.
ಅಮಾನತುಗೊಂಡಿರುವ (Suspension) ಮೂವರು ಅಧಿಕಾರಿಗಳು ಪಾಲಿಕೆಯ ಸೌತ್ ವೆಸ್ಟ್ ಝೋನ್‌ಗೆ ಸೇರಿದವರು. ಈ ಪ್ರದೇಶವನ್ನು ಈ ಹಿಂದೆ ನಜಾಫ್‌ಗಢ್ ಝೋನ್ ಎಂದು ಕರೆಯಲಾಗುತ್ತಿತ್ತು. ಗುರುವಾರ ಪಾಲಿಕೆ ಹೊರಡಿಸಿರುವ ಆದೇಶದ ಪ್ರಕಾರ, ಕಟ್ಟಡ ವಿಭಾಗದ ಸೌತ್ ವೆಸ್ಟ್ ಝೋನ್‌ನ ಸಹಾಯಕ ಎಂಜಿನಿಯರ್ ರವೀಂದರ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇವರೊಂದಿಗೆ ಇಬ್ಬರು ಕಿರಿಯ ಎಂಜಿನಿಯರ್‌ಗಳಾದ ಸುಮನ್ ಸೌರಭ್ ಮತ್ತು ಮೋಹಿತ್ ಯಾದವ್ ಅವರನ್ನೂ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಬಾಂಗ್ಲಾ ಹುರಿದು ಮುಕ್ಕಿದ ಭಾರತ – 10ನೇ ಬಾರಿ ಏಷ್ಯಾಕಪ್ ಫೈನಲ್ ತಲುಪಿದ ಸಿಂಹಿಣಿಯರು
ಅನಧಿಕೃತ ನಿರ್ಮಾಣದ ವಿಚಾರದಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸಿದೆ. ಇದನ್ನೂ ಓದಿ: ಶುಕ್ರವಾರ ದೇಶಾದ್ಯಂತ ಮುಷ್ಕರ; ಸತತ ನಾಲ್ಕು ದಿನ ಬ್ಯಾಂಕ್ ಸೇವೆ ಬಂದ್
ಈ ಹಿಂದೆ 5 ಅಧಿಕಾರಿಗಳ ಅಮಾನತು:
ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಬಳಿಕ ಸೌತ್ ಝೋನ್‌ನ ಐವರು ಅಧಿಕಾರಿಗಳನ್ನು ಈ ಹಿಂದೆಯೇ ಅಮಾನತುಗೊಳಿಸಲಾಗಿತ್ತು. ಐದು ಅಂತಸ್ತಿನ ಕಟ್ಟಡದಲ್ಲಿ ಪಿಜಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಈ ಕಟ್ಟಡ ಕುಸಿದ ಮರುದಿನವೇ ಪಾಲಿಕೆಯ ಡೆಪ್ಯುಟಿ ಕಮಿಷನರ್ ಹಾಗೂ ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: ಭಾರತದಲ್ಲಿ ಭತ್ತದ ಬೆಳೆಗೆ ನೀರಿನ ಬಳಕೆ ಕಡಿಮೆ ಮಾಡಲು IIT ಮದ್ರಾಸ್ ಹೊಸ ಪ್ರಯತ್ನ – ಕಾಮಕೋಟಿ ಹೇಳಿದ್ದೇನು?

