ಚಿತ್ರರಂಗದಲ್ಲಿ ಗಟ್ಟಿಮೆಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ-ರಾಹುಲ್, ಸಿದ್ ಮತ್ತು ಕಿಯಾರಾ ಜೋಡಿ ನಂತರ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ (Saba Azad) ಮದುವೆ (Wedding) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೀಗ ಹೃತಿಕ್- ಸಬಾ ಮದುವೆಯಾಗುತ್ತಿರೋದು ನಿಜಾನಾ ಎಂಬುದರ ಬಗ್ಗೆ ಹೃತಿಕ್ ತಂದೆ (Father) ರಾಕೇಶ್ ರೋಷನ್ (Rakesh Roshan) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು
Advertisement
ಬಾಲಿವುಡ್‌ನ (Bollywood) ಟಾಪ್ ನಟ ಹೃತಿಕ್ ರೋಷನ್ ಇದೀಗ ಸಿನಿಮಾಗಿಂತ ಸಬಾ ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಲಿಪ್ ಕಿಸ್ ಮಾಡುತ್ತಾ, ಮುಂಬೈ ಬೀದಿಗಳಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಬಿಟೌನ್ ಪಾರ್ಟಿಗಳಿಗೆ ಸಬಾ ಜೊತೆನೇ ಹೃತಿಕ್ ವಿಸಿಟ್ ಮಾಡ್ತಿದ್ದಾರೆ. ತನ್ನ ಗೆಳತಿ ಎಂದೇ ಹೃತಿಕ್ ಸ್ನೇಹಿತರ ಬಳಿ ಪರಿಚಯಿಸುತ್ತಿದ್ದಾರೆ.
Advertisement
Advertisement
ಮಾಜಿ ಪತ್ನಿ ಸುಸಾನ್ ಖಾನ್ (Sussane Khan) ಜೊತೆ ಡಿವೋರ್ಸ್ (Divorce) ಬಳಿಕ ಸಬಾ ಆಜಾದ್ (Saba Azad) ಜೊತೆ ಸಾಕಷ್ಟು ಸಮಯದಿಂದ ಹೃತಿಕ್ ರೋಷನ್ ಡೇಟಿಂಗ್ ಮಾಡ್ತಿರೋದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್-ಸಬಾ ಮದುವೆ ಬಗ್ಗೆ ಚರ್ಚೆಯಾಗಿತ್ತು. ಈ ವರ್ಷ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಹೃತಿಕ್ ತಂದೆ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ.
Advertisement
ಇವರಿಬ್ಬರ ಮದುವೆ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ನ್ಯೂಸ್ ಆಗುತ್ತಿದ್ದಂತೆ ಹೃತಿಕ್ ತಂದೆಗೆ ಶುಭಾಶಯಗಳನ್ನ ತಿಳಿಸುತ್ತಿದ್ದಂತೆ ಈ ಮದುವೆಯ ಕುರಿತು ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಕೌತುಕದ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪುತ್ರ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರ ವಿವಾಹದ ಕುರಿತು ಮಾತನಾಡಿರುವ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ. ನಾನು ಮದುವೆ ಬಗ್ಗೆ ಇನ್ನೂ ಏನೂ ಕೇಳಿಲ್ಲ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಬಿಟ್ಟು ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಗಳ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ಮಗನ ಮದುವೆಯ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.