ಬೆಂಗಳೂರು: ಕ್ಷಮೆ ಕೇಳಿದರೆ ಸರಿ ಹೋಗಲ್ಲ, ಚಂದನ್ ಶೆಟ್ಟಿಯನ್ನು ಬಂಧಿಸಬೇಕು ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಜಗದೀಶ್ ಆಗ್ರಹಿಸಿದ್ದಾರೆ.
ಇಂದು ಜಯಕರ್ನಾಟಕ ಸಂಘಟನೆಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಚಂದನ್ ಶೆಟ್ಟಿ ಪ್ರಪೋಸ್ ಮಾಡುವ ಮೂಲಕ ವಿಶ್ವಪ್ರಸಿದ್ಧ ಮೈಸೂರು ದಸರಾ ವೇದಿಕೆಯನ್ನ ವೈಯಕ್ತಿಕ ವಿಚಾರಕ್ಕೆ ಬಳಸಿದ್ದಾರೆ ಎಂದು ಖಂಡಿಸಿದ್ದಾರೆ.
Advertisement
Advertisement
ಕ್ಷಮೆ ಕೇಳಿದರೆ ಸರಿ ಹೋಗಲ್ಲ. ಆತನನ್ನು ಬಂಧಿಸಬೇಕು. ಚಂದನ್ ಶೆಟ್ಟಿಗೆ ವೇದಿಕೆ ಹತ್ತಲು ಯೋಗ್ಯತೆ ಇಲ್ಲ. ಇನ್ನು ಮುಂದೆ ಚಂದನ್ ಶೆಟ್ಟಿ ಯಾವುದೇ ವೇದಿಕೆ ಕಾರ್ಯಕ್ರಮ ಮಾಡಿದರೆ ಅವರಿಗೇ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಿಶ್ಚಿತಾರ್ಥ ಅಲ್ಲ, ನಮ್ಗೂ ಸರ್ಪ್ರೈಸ್ ಆಗಿದೆ- ನಿವೇದಿತಾ ಹೆತ್ತವರು
Advertisement
ಮೈಸೂರು ದಸರಾಕ್ಕೆ ಇದು ಅವಮಾನ ಎಂದು ಅಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ದಸರಾ ವೇದಿಕೆಗೆ ಅವಮಾನ ಮಾಡಿದ ಚಂದನ್ ಶೆಟ್ಟಿಯನ್ನ ಬಂಧಿಸುವಂತೆ, ಅಲ್ಲದೆ ಚಂದನ್ ಮೇಲೆ ಕೇಸು ದಾಖಲಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಇದು ಅಪಮಾನ ಮಾಡಿದ ಹಾಗೇ ಎಂದು ಅರೋಪ ಮಾಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ
Advertisement
ಇದೇ ವೇಳೆ ಜಯಕರ್ನಾಟಕ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಐತಿಹಾಸಕ ಪರಂಪರೆ ಇರುವ ದಸರಾಕ್ಕೆ ಕಳಂಕ ತಂದಿದ್ದಾರೆ. ಹಿನ್ನಲೆ ಗಾಯಕ ಚಂದನ್ ಶೆಟ್ಟಿಯ ಮೈಸೂರು ದಸರಾ ವೇದಿಕೆಯನ್ನ ವೈಯುಕ್ತಿಕ ವಿಚಾರಕ್ಕೆ ಬಳಕೆ ಮಾಡಿಕೊಂಡಿದ್ದಾನೆ. ಇದು ಸರ್ಕಾರದ ವೇದಿಕೆ, ಏನ್ ಆ ವೇದಿಕೆ ಅವರಪ್ಪನದ್ದಾ, ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ನಮ್ಮ ದಸರಾಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ
ಮೈಸೂರು ಯುವ ದಸರಾ ಕಾರ್ಯಕ್ರಮದ ವೇಳೆ ಶುಕ್ರವಾರ ವೇದಿಕೆಯಲ್ಲೇ ಸಾವಿರಾರು ಜನರ ಸಮ್ಮುಖದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಚಂದನ್ ಪ್ರತಿಕ್ರಿಯಿಸಿ, ನಾನು ಮಾಡಿದ್ದು ತಪ್ಪಾದರೆ ಕ್ಷಮೆಯಿರಲಿ ಎಂದು ಹೇಳಿದ್ದಾರೆ. ಇತ್ತ ನಿವೇದಿತಾ ಪ್ರತಿಕ್ರಿಯಿಸಿ, ವೇದಿಕೆ ಮೇಲೆ ಮದುವೆಯಾಗಿದ್ದರೆ ತಪ್ಪು ಅಂತ ನಾನೂ ಒಪ್ಪಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ