ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಸಿಂಗರ್ ನಿಕ್ ಜೋನಾಸ್ 3ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ನಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ನಿಕ್ ಜೋನಾಸ್ ವರ್ಕೌಟ್ ಮಾಡುತ್ತಿದ್ದ ವೀಡಿಯೋಗೆ ರೋಮ್ಯಾಂಟಿಕ್ ಆಗಿ ಕಾಮೆಂಟ್ ಮಾಡುವ ಮೂಲಕ ಪ್ರಿಯಾಂಕಾ ಚೋಪ್ರಾ ವಿಚ್ಛೇದನ ಗಾಸಿಪ್ಗೆ ಬ್ರೇಕ್ ಹಾಕಿದ್ದರು. ಇದನ್ನೂ ಓದಿ: ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು
ಇದೀಗ ಪ್ರಿಯಾಂಕಾ ಹಾಗೂ ನಿಕ್ ಡಿಸೆಂಬರ್ 1 ರಂದು ಲಂಡನ್ನಲ್ಲಿ ಮದುವೆ ವಾರ್ಷಿಕೋತ್ಸವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇನ್ನೂ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಶನ್ ವೀಡಿಯೋವನ್ನು ನಿಕ್ ಜೋನಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಫಾರ್ ಎವರ್(ಎಂದೆಂದಿಗೂ) ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?
View this post on Instagram
ವೀಡಿಯೋದಲ್ಲಿ ಪತ್ನಿಗೆ ಇಷ್ಟವಾಗುವಂತೆ ಫಾರ್ ಎವರ್ ಜೋಡಿಸಿರುವ ಅಕ್ಷರ, ಕ್ಯಾಡಲ್ ಲೈಟ್ಗಳನ್ನು ಹಾಗೂ ಡೇಬಲ್ ಮೇಲೆ ಬಣ್ಣ, ಬಣ್ಣದ ಹೂವಿಗಳಿಂದ ಅಲಂಕರಿಸಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ವೀಡಿಯೋದಲ್ಲಿ ಟೇಬಲ್ ಮೇಲೆ ಕುಳಿತು ಪ್ರಿಯಾಂಕಾ ಚೋಪ್ರಾ ಹಾಯ್ ಮಾಡುತ್ತಾ ಕ್ಯೂಟ್ ಆಗಿ ಸ್ಮೈಲ್ ಮಾಡಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್ಗೆ ಬ್ರೇಕ್ ಹಾಕಿದ ಪ್ರಿಯಾಂಕಾ ಚೋಪ್ರಾ
View this post on Instagram
ಪ್ರಿಯಾಂಕಾ ಚೋಪ್ರಾ ಕೂಡ ಸೆಲೆಬ್ರೆಶನ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಟೇಬಲ್ ಮೇಲೆ ನಿಮ್ಮನ್ನು ಕಂಡುಕೊಂಡೆ, ಮದುವೆಯಾದೆ, ನಿಮ್ಮನ್ನು ಉಳಿಸಿಕೊಂಡೆ ಎಂಬ ಕಾರ್ಡ್ ಇರುವುದನ್ನು ಕಾಣಬಹುದಾಗಿದೆ.