ಚಾಮರಾಜನಗರ: ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು ಕಾರಿನಿಂದ ಕೆಳಗಿಳಿದು ಆನೆಯನ್ನು (Elephant) ಹಿಂಬಾಲಿಸಿ ತೊಂದರೆ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾ.ಹೆ. 948 ರಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧ ಇದೆ. ಅರಣ್ಯ ಇಲಾಖೆ ನಿಯಮವನ್ನು ಪ್ರವಾಸಿಗರು ಹಾಗೂ ವಾಹನ ಸವಾರರು ಪಾಲಿಸುತ್ತಿಲ್ಲ. ರಾತ್ರಿ ವೇಳೆ ನಿಷೇಧಿತ ರಸ್ತೆಯಲ್ಲಿ ರಾಜಾರೋಷವಾಗಿ ವಾಹನಗಳು ಸಂಚರಿಸುತ್ತಿವೆ. ಈ ವೇಳೆ ಕಾಡಿನೊಳಗೂ ವಾಹನಸವಾರರು ತೆರಳುತ್ತಿದ್ದಾರೆ. ಇದನ್ನೂ ಓದಿ: ಚಾಮರಾಜನಗರ | ಕಾಡಾನೆ ದಾಳಿ; ಬೈಕ್ ಸವಾರ ಜಸ್ಟ್ ಮಿಸ್
ಇದೇ ರೀತಿ ಕಾರಿನಿಂದ ಇಳಿದು ಕಾಡಾನೆಯ ಬೆನ್ನಟ್ಟುವ ದುಸ್ಸಾಹಸವನ್ನು ಪುಂಡರ ಗುಂಪೊಂದು ಮಾಡಿದೆ. ಪುಂಡರ ಹಾವಳಿಯಿಂದ ಕಾಡುಪ್ರಾಣಿಗಳ ನೆಮ್ಮದಿಗೆ ತೊಂದರೆಯಾಗುತ್ತಿದೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ (Forest Department) ಹಿಂದೇಟು ಹಾಕುತ್ತಿದೆಯೇ? ಎಂಬ ಪ್ರಶ್ನೆ ಸಹ ಮೂಡಿದೆ. ಇದನ್ನೂ ಓದಿ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಹುಲಿ – ನಿಟ್ಟುಸಿರು ಬಿಟ್ಟ ರೈತರು
