ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (Delimitation) ಮತ್ತು ಮಹಿಳಾ ಮೀಸಲಾತಿ ಮಸೂದೆಗಳಿಗೆ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷ ತನ್ನ ಬೆಂಬಲವನ್ನು ಘೋಷಿಸಿದ ಬೆನ್ನಲ್ಲೇ ರಾತ್ರಿ ಪಕ್ಷದ ನಾಯಕರು ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಶನಿವಾರ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(Stalin) ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಧಾರದ ಬೆನ್ನಲ್ಲೇ ಟಿ ಆರ್ ಬಾಲು, ಕನಿಮೋಳಿ, ದಯಾನಿಧಿ ಮಾರನ್, ಎ ರಾಜಾ ಮತ್ತು ಪಿ ವಿಲ್ಸನ್ ಅವರಿದ್ದ ಡಿಎಂಕೆ ನಿಯೋಗ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಕನಿಮೊಳಿ, “ಕ್ಷೇತ್ರ ಪುನರ್ವಿಂಗಡಣೆ ಕುರಿತು ಈ ಹಿಂದೆ ನಾವು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದ ಮತ್ತು 2024ರಲ್ಲಿ ತಮಿಳುನಾಡು (Tamil Nadu) ಸರ್ಕಾರ ಅಂಗೀಕರಿಸಿದ್ದ ನಿರ್ಣಯದ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಈಗ ಮಸೂದೆಯಲ್ಲಿ ಸೇರಿಸಿದೆ. ಈ ಹಿಂದೆ 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮುಂದಾಗಿದ್ದಾಗ, ತಮಿಳುನಾಡಿಗೆ ಸಂಸದರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ನಾವು ವಿರೋಧಿಸಿದ್ದೆವು. ಆದರೆ ಈಗ 1971ರ ಜನಗಣತಿಯ ಆಧಾರದಲ್ಲೇ ಸ್ಥಾನಗಳನ್ನು ಹೆಚ್ಚಿಸಲು ಮತ್ತು ಮುಂದಿನ 25 ವರ್ಷಗಳ ಕಾಲ ಅದೇ ವ್ಯವಸ್ಥೆಯನ್ನು ಮುಂದುವರಿಸಲು ಕೇಂದ್ರ ಒಪ್ಪಿಕೊಂಡಿದೆ ಎಂದು ವಿವರಿಸಿದರು.
VIDEO | Delhi: DMK MP Kanimozhi after meeting Home Minister Amit Shah says, “Backing Delimitation Bill doesn’t mean we are with BJP; we never changed our stance, only seeking fair delimitation.”
(Full video available on PTI Videos – https://t.co/d8jp61yd2p) https://t.co/kXWVYUiJ9S
— Press Trust of India (@PTI_News) November 28, 2026
ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಿದ ಮಾತ್ರಕ್ಕೆ ನಾವು ಬಿಜೆಪಿ ಜೊತೆಗಿದ್ದೇವೆ ಎಂದರ್ಥವಲ್ಲ; ನಾವು ನಮ್ಮ ನಿಲುವನ್ನು ಎಂದಿಗೂ ಬದಲಿಸಿಕೊಂಡಿಲ್ಲ, ಕೇವಲ ನ್ಯಾಯಯುತವಾದ ಕ್ಷೇತ್ರ ಮರುವಿಂಗಡಣೆಯನ್ನು ಮಾತ್ರ ಬಯಸುತ್ತಿದ್ದೇವೆ ಎಂದು ತಿಳಿಸಿದರು.
ಈ ಹೊಸ ಮಸೂದೆಯ ಅನ್ವಯ, ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ 39ರಿಂದ 59ಕ್ಕೆ ಏರಿಕೆಯಾಗಲಿದೆ. ಅಲ್ಲದೆ, ಈ ಮಸೂದೆ ಅಂಗೀಕಾರವಾದ ಬಳಿಕ ಮಹಿಳಾ ಮೀಸಲಾತಿ ಮಸೂದೆಯೂ ಜಾರಿಯಾಗಲಿದೆ ಎಂದು ಕನಿಮೊಳಿ ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸಂಚು: ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ರಾಗಾ ಕಿಡಿ
#WATCH | Delhi: After DMK MPs met Union Home Minister Amit Shah to convey the party’s support for the Delimitation Bill, DMK MP Kanimozhi says, “This morning, our leader Mr MK Stalin had called for a DMK MPs’ meeting, and we reached a decision about our stand on the Delimitation Bill, and a statement was issued that we are going to support it. So we came to tell the Home Minister and the government about our stand.”
On the party’s position on Tamil Nadu’s representation and women’s quota, she says, “When the government said that they will be increasing the number of seats, we wanted it to be done on the 1971 basis, and they have agreed to that, and a freeze on that for 25 years has also been accepted. So today, Tamil Nadu’s number of MPs will be going up from 39 to 59… After this bill is passed, the Women’s Reservation Bill will be implemented.”
— ANI (@ANI) November 28, 2026
ಇದಕ್ಕೂ ಮುನ್ನ ಅಣ್ಣಾ ಅರಿವಾಲಯಂನಲ್ಲಿ ನಡೆದ ಸಂಸದರ ಸಭೆಯಲ್ಲಿ ಮಾತನಾಡಿದ ಎಂ.ಕೆ. ಸ್ಟಾಲಿನ್, ಭಾವನೆಗಳಿಗೆ ಒಳಗಾಗದೆ ದೂರದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಮುಂದಿನ 25 ವರ್ಷಗಳ ಕಾಲ ರಾಜ್ಯದ ಸಂಸದೀಯ ಪ್ರಾತಿನಿಧ್ಯವನ್ನು ರಕ್ಷಿಸುವಲ್ಲಿ ನಮ್ಮ ಪಕ್ಷ ಯಶಸ್ವಿಯಾಗಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಮೇಲಾಗುವ ಪರಿಣಾಮಗಳ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಡಿಎಂಕೆ” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
