ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸೌಂಡ್ ಮಾಡುತ್ತಿರುವ `ಗಾಳಿಪಟ -2′ ಸಿನಿಮಾದ ಸಕ್ಸಸ್ ನಂತರ ನಿರ್ದೇಶಕ ಯೋಗರಾಜ್ ಭಟ್, ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್ ಸಿನಿಮಾಗೆ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಈ ಸ್ಟಾರ್ ನಟರಿಗೆ ನಾಯಕಿಯರನ್ನ ಕೂಡ ಯೋಗರಾಜ್ ಭಟ್ ಹುಡುಕಿದ್ದಾರೆ.
ಇತ್ತೀಚೆಗಷ್ಟೇ ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ನಲ್ಲಿ ನಿರ್ದೇಶನ ಮಾಡುವುದಾಗಿ ಭಟ್ರು ಅಧಿಕೃತವಾಗಿ ಹೇಳಿದ್ದರು. ಇದೀಗ ಈ ಸಿನಿಮಾಗಾಗಿ ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಚಿತ್ರಕ್ಕೆ ಚಂದನವನದ ಪ್ರತಿಭಾವಂತ ನಾಯಕಿಯರನ್ನೇ ಭಟ್ರು ಹುಡುಕಿದ್ದಾರೆ.
ಬಿಗ್ ಸ್ಟಾರ್‌ಗಳಿರುವ ಈ ಪ್ರಾಜೆಕ್ಟ್ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದೇ ಆಗಸ್ಟ್ 20ಕ್ಕೆ ಸಿನಿಮಾ ಕೂಡ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]