– ಕೃತಕ ಕೊರತೆ ಹಿನ್ನೆಲೆ ಸಕ್ಕರೆ, ಬೆಲ್ಲವೂ ಕಹಿ
ಬೆಂಗಳೂರು: ರಾಜ್ಯದ ಜನರಿಗೆ ಪ್ರತಿನಿತ್ಯ ಒಂದಿಲ್ಲೊಂದು ಬೆಲೆ ಏರಿಕೆಯ (Price Hike) ಬರೆ ಬೀಳುತ್ತಿದೆ. ಇದೀಗ ಶ್ರಾವಣಮಾಸದ ಹಬ್ಬದ ಸಮಯದಲ್ಲೇ ಸಕ್ಕರೆ, ಬೆಲ್ಲ, ಈರುಳ್ಳಿ, ಬೆಳ್ಳುಳ್ಳಿ ಬೆಲೆ ಜನಸಾಮಾನ್ಯರ ಜೇಬನ್ನು ಖಾಲಿ ಮಾಡಿಸುತ್ತಿದೆ.
ಪ್ರಮುಖವಾಗಿ ಮಳೆಯಿಲ್ಲದೇ ರಾಜ್ಯದ ಈರುಳ್ಳಿ (Onion) ಇಳುವರಿ ಕುಸಿತವಾಗಿದ್ದರಿಂದ ಹಾಗೂ ಕೇಂದ್ರ ಬೇರೆ ದೇಶಗಳಿಂದ ಈರುಳ್ಳಿ ಆಮದು ತೆಗೆದುಕೊಳ್ಳದ ಹಿನ್ನೆಲೆ, ಪೂರೈಕೆ ಕಡಿಮೆಯಾಗಿ ಈರುಳ್ಳಿ ದರ ಗಗನಕ್ಕೇರಿದೆ. ಸದ್ಯ ಹಾಪ್ ಕಾಮ್ಸ್‌ನಲ್ಲಿ (Hopcoms) ಕೆ.ಜಿಗೆ 71 ರೂ. ಆಗಿದೆ. ಹಾಗೆಯೇ ಬೆಳ್ಳುಳ್ಳಿ (Garlic) ಅಂತೂ ಕೆ.ಜಿಗೆ 300 ರೂ., ಬೆಳ್ಳುಳ್ಳಿ ಬಿಡಿಸಿದ್ದು 350 ರೂ. ಆಗಿದೆ. ಇದನ್ನೂ ಓದಿ: Nepal Flood Horror | ಬೆಂಗಳೂರಿನ 11 ಮಂದಿ ಸೇರಿ ಕರ್ನಾಟಕದ 13 ಮಂದಿ ವಿವರ ಲಭ್ಯ
ಹಾಗೆಯೇ ಸಕ್ಕರೆ (Sugar) ಬೆಲೆ ಕೆಜಿಗೆ 66 ರೂ. ಹಾಗೂ ಬೆಲ್ಲ (Jaggery) 68 ರೂ. ಆಗಿದೆ. ಈ ದರ ಏರಿಕೆಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ದೇಶಾದ್ಯಂತ 41 ಅಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಮುಂದಾಳತ್ವದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ರಾಜ್ಯಗಳಲ್ಲೂ ಬೆಲೆ ಏರಿಕೆ ಮೇಲೆ ನಿಗಾ ಇರಿಸಿದೆ. ಇದನ್ನೂ ಓದಿ: ಕರ್ನಾಟಕ, ದೆಹಲಿ ಬಳಿಕ UP ನಲ್ಲೂ ಫುಡ್ ಸೇಫ್ಟಿ ರೇಡ್ – 200 ಕೆಜಿ ಕಲಬೆರಕೆ ಸ್ವೀಟ್ಸ್ ಸೀಜ್
