– 114 ರನ್‌ಗಳ ಭರ್ಜರಿ ಜಯ
ನಿಸ್ಶಿನ್: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡೆಯ(Asian Games) ಸೆಮಿಫೈನಲ್‌ನಲ್ಲಿ ಶಫಾಲಿ ವರ್ಮಾ ಅವರ ಸ್ಫೋಟಕ ಶತಕದ ಆಟದ ನೆರವಿನಿಂದ ಬಾಂಗ್ಲಾ ತಂಡವನ್ನು 114 ರನ್‌ಗಳ ಅಂತರದಿಂದ ಸೋಲಿಸಿದ ಭಾರತ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಭಾರತ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 15.4 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲೌಟ್ ಆಯ್ತು.
ಈ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದ್ದು ಚಿನ್ನದ ಪದಕಕ್ಕಾಗಿ ಶ್ರೀಲಂಕಾ ಜೊತೆ ಕಾದಾಟ ನಡೆಸಲಿದೆ. ಇದನ್ನೂ ಓದಿ: Asian Games 2026 | ಭಾರತದ ಪದಕ ಬೇಟೆ ಆರಂಭ – ಬೆಳ್ಳಿಗೆ ಶೂಟ್
Shafali Verma turns on the power and brings up a magnificent hundred! 🥵
Watch India vs Bangladesh semi-final match at the Asian Games 2026, LIVE NOW on Sony Sports Network TV channels & Sony LIV.#SonySportsNetwork #SonyLIV #AsianGames #AichiNagoya2026… pic.twitter.com/CuEynV9TNy
— Sony Sports Network (@SonySportsNetwk) September 20, 2026
ಲಂಕಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ನಂದಿನಿ ಶರ್ಮಾ ಮತ್ತು ದೀಪ್ತಿ ಶರ್ಮಾ ತಲಾ 3 ವಿಕೆಟ್ ಕಿತ್ತರೆ ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 24 ಎಸೆತಗಳಲ್ಲಿ 50 ರನ್ ಹೊಡೆದರೆ ಅಂತಿಮವಾಗಿ 49 ಎಸೆತಗಳಲ್ಲಿ 3 ಬೌಂಡರಿ, 9 ಸಿಕ್ಸ್ ಸಿಡಿಸಿ ಅಜೇಯ 100 ರನ್ ಸಿಡಿಸಿದರು. ಸ್ಮೃತಿ ಮಂಧಾನ 37 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 40 ರನ್ ಹೊಡೆದು ಔಟಾದರು.

