ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ‘ಜೇಮ್ಸ್’ ನಾಳೆ ಭಾರತದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಸಾಹಸ ದೃಶ್ಯಗಳನ್ನು ರವಿವರ್ಮಾ ಕಂಪೋಸ್ ಮಾಡಿದ್ದು, ಅವರ ಕ್ರಿಯೇಟಿವಿಟಿಗೆ ಸ್ವತಃ ಅಪ್ಪು ಫಿದಾ ಆಗಿದ್ದಾರೆ. ಸ್ಟಂಟ್ ಗಳನ್ನು ನೋಡಿ ರವಿವರ್ಮಾ ಅವರಿಗೆ ಫೋನ್ ಕಾಲ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಪುನೀತ್ ಮತ್ತು ರವಿವರ್ಮಾ ಮಾತಾಡಿರುವ ಆ ಆಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
‘ಜೇಮ್ಸ್’ ಚಿತ್ರದ ಸಾಹಸ ದೃಶ್ಯಗಳನ್ನು ನೋಡಿದ ಅಪ್ಪು ಅವರು ರವಿವರ್ಮಾ ಅವರಿಗೆ ಕರೆ ಮಾಡುವ ಮೂಲಕ ಹೊಗಳಿದ್ದಾರೆ. ಫೋನ್ನಲ್ಲಿ ಅಪ್ಪು, ಸೂಪರ್ ಮಾಸ್ಟರ್ ನಾನು ಇವತ್ತು ನೀವು ನಿರ್ದೇಶನ ಮಾಡಿದ ದೃಶ್ಯಗಳನ್ನು ನೋಡಿದೆ ತುಂಬಾ ಖುಷಿಯಾಗುತ್ತಿದೆ. ಈ ದೃಶ್ಯಗಳಿಗೆ ಸೌಂಡ್ ಮತ್ತು ಸೌಂಡ್ ಎಫೆಕ್ಟ್ಸ್ ಹಾಕಿದರೆ ಇನ್ನು ಅದ್ಭುತವಾಗಿ ಮೂಡಿಬರುತ್ತೆ. ಸೂಪರ್ ವರ್ಕ್. ಚೇಸಿಂಗ್ ಸ್ಟೈಲ್, ಸ್ಪಿನಿಂಗ್ ಮತ್ತು ಗ್ರಾಫಿಕ್ ಆದ ಮೇಲೆ ಇನ್ನು ಅದ್ಭುತವಾಗಿ ಕಾಣುತ್ತೆ. ಥ್ಯಾಂಕ್ಯು ಸರ್ ಎಂದು ರವಿವರ್ಮಾ ಅವರನ್ನು ಪ್ರಶಂಸಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್
Advertisement
View this post on Instagram
Advertisement
ಜೇಮ್ಸ್ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದ್ದು, ಅಪ್ಪುನನ್ನು ಸ್ವಾಗತಿಸಲು ಎಲ್ಲ ಚಿತ್ರಮಂದಿರಗಳು ಮದುವೆ ದಿಬ್ಬಣದಂತೆ ಸಿಂಗಾರಗೊಂಡಿವೆ. ಈ ನಡುವೆ ‘ಜೇಮ್ಸ್’ ಶೂಟಿಂಗ್ ಸಮಯದಲ್ಲಿ ಕಲಾವಿದರು ಅಪ್ಪು ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.