ಫುಟ್ಬಾಲ್ ದಿಗ್ಗಜ, ಪೋರ್ಚುಗಲ್‌ನ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಆದಾಯದ ಅಂಕಿ-ಅಂಶಗಳು ಮತ್ತೆ ಜಗತ್ತಿನ ಗಮನ ಸೆಳೆದಿವೆ. ಕೇವಲ 90 ನಿಮಿಷಗಳ ಒಂದು ಪಂದ್ಯದಿಂದಲೇ ಸುಮಾರು 30 ಕೋಟಿ ರೂ. ಆದಾಯ ಗಳಿಸುತ್ತಿರುವ ರೊನಾಲ್ಡೊ, ತಮ್ಮ ಭಾರೀ ಸಂಪಾದನೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
41 ವರ್ಷದ ರೊನಾಲ್ಡೊ ಸೌದಿ ಅರೇಬಿಯಾದ ಕ್ಲಬ್ ಜೊತೆಗಿನ ಒಪ್ಪಂದದ ಮೂಲಕ ವರ್ಷಕ್ಕೆ ಸುಮಾರು 1,700 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಕ್ಲಬ್ ಹಾಗೂ ದೇಶದ ಪರ ಸರಾಸರಿ 55 ಪಂದ್ಯಗಳನ್ನು ಆಡುತ್ತಾರೆ ಎಂದು ಲೆಕ್ಕ ಹಾಕಿದರೆ, ಪ್ರತಿ ಪಂದ್ಯಕ್ಕೆ ಸುಮಾರು 30 ಕೋಟಿ ರೂಪಾಯಿ ಆದಾಯ ಬರುತ್ತದೆ.
ಅಂದರೆ ಕೇವಲ 90 ನಿಮಿಷಗಳ ಆಟದಿಂದಲೇ ಅವರು ಗಳಿಸುವ ಮೊತ್ತ, ಅನೇಕ ಕಂಪನಿಗಳ ವಾರ್ಷಿಕ ವೇತನ ವೆಚ್ಚಕ್ಕೆ ಸಮಾನವಾಗಿದೆ.ಇದನ್ನೂ ಓದಿ: ವಿಶ್ವದ ಮೊದಲ ಲಕ್ಷ ಕೋಟ್ಯಧಿಪತಿಯಾದ ಮಸ್ಕ್ – SpaceX ಉದ್ಯೋಗಿಗಳು ಈಗ ಕೋಟ್ಯಧಿಪತಿ
ಇನ್ನು ರೊನಾಲ್ಡೊ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 10,000 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಎರಡು ದಶಕಗಳಿಗಿಂತ ಹೆಚ್ಚು ಕಾಲದ ಫುಟ್ಬಾಲ್ ವೃತ್ತಿಜೀವನ, ಜಾಹೀರಾತು ಒಪ್ಪಂದಗಳು, ಬ್ರ್ಯಾಂಡ್ ಪ್ರಚಾರ, ಉದ್ಯಮ ಹೂಡಿಕೆಗಳು ಮತ್ತು ಸೋಷಿಯಲ್ ಮೀಡಿಯಾದಿಂದ ಈ ಸಂಪತ್ತು ನಿರ್ಮಾಣವಾಗಿದೆ.
ಒಂದೆಡೆ ವರ್ಷಕ್ಕೆ 12 ಲಕ್ಷ ರೂಪಾಯಿ ಸಂಬಳ ಪಡೆಯುವ ಭಾರತೀಯ ಉದ್ಯೋಗಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ರೊನಾಲ್ಡೊ ಒಂದು ಪಂದ್ಯದಲ್ಲಿ ಗಳಿಸುವ 30 ಕೋಟಿ ರೂಪಾಯಿ ಸಂಪಾದಿಸಲು ಸುಮಾರು 2,500 ವರ್ಷ ಕೆಲಸ ಮಾಡಬೇಕಾಗುತ್ತದೆ. ಅದೇ ರೀತಿ ರೊನಾಲ್ಡೊ ಅವರ 10,000 ಕೋಟಿ ರೂಪಾಯಿ ಆಸ್ತಿ ಮೌಲ್ಯ ತಲುಪಲು ವರ್ಷಕ್ಕೆ 12 ಲಕ್ಷ ರೂಪಾಯಿ ಆದಾಯ ಹೊಂದಿರುವ ವ್ಯಕ್ತಿಗೆ ಸುಮಾರು 83 ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲ ಬೇಕಾಗುತ್ತದೆ.ಇದನ್ನೂ ಓದಿ: ಇಂದಿನಿಂದ 23ನೇ ಆವೃತ್ತಿಯ FIFA ವಿಶ್ವಕಪ್ ಮಹಾಸಮರ ಆರಂಭ
