ನೆಲಮಂಗಲ: 15ಕ್ಕೂ ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಕುಖ್ಯಾತ ಸರಗಳ್ಳನ ಮೇಲೆ ಗುಂಡು ಹಾರಿಸಿ (Shootout) ಪೊಲೀಸರು (Nelamangala Town Police) ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ನೆಲಮಂಗಲದ ಬಿನ್ನಮಂಗಲದ ಬಳಿ ನಡೆದಿದೆ.
Advertisement
ನೆಲಮಂಗಲ ಟೌನ್ ಸಿಪಿಐ (CPI) ಶಶಿಕುಮಾರ್ ಫೈರಿಂಗ್ ಕುಖ್ಯಾತ ಸರಗಳ್ಳ ಯೋಗ ಯೋಗಾನಂದ್ (31) ಮೇಲೆ ಗುಂಡುಹಾರಿಸಿದ್ದು, ಆರೋಪಿಯನ್ನ ನೆಲಮಂಗಲ ಆಸ್ಪತ್ರೆಗೆ (Nelamangala Hospital) ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಕಾನ್ಸ್ಟೇಬಲ್ ಹನುಮಂತ ಹಿಪ್ಪರಗಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ‘ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್ ಆರೋಪ
Advertisement
Advertisement
15 ಕೇಸ್‌ಗಳಲ್ಲಿ (FIR) ವಾಂಟೆಡ್ ಆಗಿದ್ದ ಮರಸಿಂಗನಹಳ್ಳಿ ಮದ್ದೂರು ಮೂಲದ ಯೋಗಾನಂದ್ ಪೆಪ್ಪರ್ ಸ್ಪ್ರೆ ಬಳಸಿ ಸಿನಿಮೀಯ ರೀತಿಯಲ್ಲಿ ಸರಗಳನ್ನ ಕದಿಯುತ್ತಿದ್ದ. ಸಾಕಷ್ಟು ದರೋಡೆ, ಬೈಕ್ ನಲ್ಲಿ ಚೈನ್ ಸ್ನ್ಯಾಚ್, ಮನೆಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ಪೊಲೀಸರ ಮೇಲೆ ಆರೋಪಿ ಹಾಲೋಬ್ರಿಕ್ ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಹನುಮಂತ ಹಿಪ್ಪರಿಗಿ ಗಾಯಗೊಂಡಿದ್ದಾರೆ. ನಂತರ ಟೌನ್ ಸಿಪಿಐ ಶಶಿಧರ್ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಇದನ್ನೂ ಓದಿ: ಜೋಡೊ ಯಾತ್ರೆಗೆ ಬರೋ ಕಲಾವಿದರಿಗೆ ಕಾಂಗ್ರೆಸ್ ಹಣ ಕೊಟ್ಟಿದೆ – BJP ಟೀಕೆಗೆ ಖಡಕ್ ಉತ್ತರ ಕೊಟ್ಟ ನಟಿ
Advertisement
ಆರೋಪಿ ವಿರುದ್ಧ ರಾಮನಗರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.