ಅಪೌಷ್ಟಿಕ ಮಗುವಿಗೆ ಸ್ತನ್ಯಪಾನ ಮಾಡಿಸಿದ ಪೊಲೀಸ್ ಅಧಿಕಾರಿಗೆ ಸಿಕ್ತು ಪ್ರಮೋಶನ್

ಬ್ಯೂನಸ್ ಐರಿಸ್: ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವನ್ನು ಸ್ತನ್ಯಪಾನ ಮಾಡಿಸಿದ ಅರ್ಜೆಂಟಿನಾದ ಪೊಲೀಸ್ ಅಧಿಕಾರಿಗೆ ಬಡ್ತಿ ದೊರೆತಿದೆ.

ಅಳುತ್ತಿದ್ದ ಅಪೌಷ್ಟಿಕತೆ ಮಗುವಿಗೆ ಸ್ತನ್ಯಪಾನ ಮಾಡಿಸಿದ ಸೆಲೆಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಸೆಲೆಸ್ಟ್ ಅವರ ಈ ಕಾರ್ಯ ನೋಡಿ ಬ್ಯೂನಸ್ ಐರಿಸ್‍ನ ಉಪರಾಷ್ಟ್ರಪತಿ ಕ್ರಿಸ್ಟಿಯನ್ ರಿಟೋಂಡೋ ಅವರಿಗೆ ಪೊಲೀಸ್ ಅಧಿಕಾರಿಯಿಂದ ಸಾರ್ಜೆಂಟ್ ಆಗಿ ಪ್ರಮೋಶನ್ ನೀಡಿದ್ದಾರೆ.

ಸೆಲೆಸ್ಟ್‍ಗೆ ಪ್ರೋಮೋಶನ್ ನೀಡಿ ಆಕೆಯನ್ನು ಗುರುತಿಸಲು ನಮಗೆ ಒಂದು ಅವಕಾಶ ಸಿಕ್ಕಿದೆ. ಅಳುತ್ತಿರುವ ಮಗುವನ್ನು ಸೆಲೆಸ್ಟ್ ಪ್ರೀತಿಯಿಂದ ಸಮಾಧಾನ ಪಡಿಸಿದ ರೀತಿ ನಮ್ಮೆಲರಿಗೆ ಇಷ್ಟವಾಯಿತು. ಸೆಲೆಸ್ಟ್ ಆ ಮಗುವಿಗೆ ಪ್ರೀತಿ ತೋರಿದ ರೀತಿ ನೋಡಿ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ ಎಂದು ಕ್ರಿಸ್ಟಿಯನ್ ರಿಟೋಂಡೋ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಗು ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ- ಸ್ತನ್ಯಪಾನ ಮಾಡಿ ಮಾನವಿಯತೆ ಮೆರೆದ ಪೊಲೀಸ್ ಅಧಿಕಾರಿ

ಸೆಲೆಸ್ಟ್ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋ ಲಕ್ಷಕ್ಕೂ ಹೆಚ್ಚು ಶೇರ್ ಆಗಿ, ನೂರಾರು ಕಮೆಂಟ್ಸ್ ಬಂದಿದೆ. ಅಲ್ಲದೇ ಸೆಲೆಸ್ಟ್ ಹೆಸರು ಟ್ವಿಟ್ಟರ್ ನಲ್ಲಿ ಹ್ಯಾಶ್‍ಟ್ಯಾಗ್ ಆಗಿ ಬಳಸಲಾಗುತ್ತಿದೆ. ಸದ್ಯ ಸೆಲೆಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾರೆ.

ಸೆಲೆಸ್ಟ್, ಸೋರ್ ಮರಿಯಾ ಲುಡೋವಿಕಾ ಮಕ್ಕಳ ಆಸ್ಪತ್ರೆಯಲ್ಲಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈ ವೇಳೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಗು ನಿರಂತವಾಗಿ ಅಳಲು ಶುರು ಮಾಡಿತ್ತು. ಸೆಲೆಸ್ಟ್ ಆ ಮಗುವಿನ ಅಳಲು ಕೇಳಲಾಗದೇ ಮಗುವಿಗೆ ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿಕೊಂಡಿದ್ದರು. ಆಸ್ಪತ್ರೆ ಸಿಬ್ಬಂದಿ ಅನುಮತಿ ನೀಡಿದ ಕೂಡಲೇ ಸೆಲೆಸ್ಟ್ ಸ್ತನ್ಯಪಾನ ಮಾಡಿಸಲು ಶುರು ಮಾಡಿದ ತಕ್ಷಣ ಮಗು ಶಾಂತವಾಗಿತ್ತು.

ಮಗುವಿಗೆ ಸ್ತನ್ಯಪಾನ ಮಾಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಲೆಸ್ಟ್, “ನಾನು ಆ ಮಗುವನ್ನು ಗಮನಿಸಿದೆ. ಅದು ಹಸಿವಿನಿಂದ ಅಳುತ್ತಿತ್ತು. ಅಲ್ಲದೇ ಮಗು ತನ್ನ ಕೈಯನ್ನು ಬಾಯಿಯೊಳಗೆ ಇಡುತ್ತಿತ್ತು. ನಾನು ಮಗುವನ್ನು ಅಪ್ಪಿಕೊಂಡು ಸ್ತನ್ಯಪಾನ ಮಾಡಿಸಬಹುದಾ ಎಂದು ಆಸ್ಪತ್ರೆ ಸಿಬ್ಬಂದಿಗೆ ಕೇಳಿಕೊಂಡೆ. ಇದು ತುಂಬಾ ದುಃಖದ ಕ್ಷಣವಾಗಿತ್ತು. ಆ ಮಗುವನ್ನು ಆ ಸ್ಥಿತಿಯಲ್ಲಿ ನೋಡಿ ನನ್ನ ಹೃದಯ ಮಿಡಿಯುತಿತ್ತು. ಮಕ್ಕಳಿಗೆ ಸಂಬಂಧಿಸಿದಂತೆ ಸಮಾಜ ಸ್ವಲ್ಪ ಸೂಕ್ಷ್ಮವಾಗಿರಬೇಕು. ಆದರೆ ಇದು ಇಲ್ಲಿ ನಡೆಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Leave a Reply

Your email address will not be published. Required fields are marked *