ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ಫೈರಿಂಗ್ ನಡೆಸಿದ್ದಾರೆ.
ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ರಾಮಕೃಷ್ಣ ಎಂಬವರನ್ನು ಅಪಹರಿಸಿದ ಉಮೇಶ್ ಮಾಳಗಿ ಮತ್ತು ಬಾಬು ಅಲಿಯಾಸ್ ಬಾಬ್ಯಾ ಒಂದು ಲಕ್ಷ ರೂ.ಗೆ ಬೇಡಿಕೆಯನ್ನು ಇಟ್ಟಿದ್ದರು. ವಿಷಯ ತಿಳಿದ ಕೂಡಲೇ ಚೌಕ ಠಾಣೆ ಪಿಐ ಹಿರೇಮಠರಿಂದ ದರೋಡೆಕೋರ ಮೇಲೆ ಫೈರಿಂಗ್ ನಡೆಸಲಾಯಿತು. ದರೋಡೆಕೋರರೊಂದಿಗೆ ನಡೆದ ಕಾಳಗದಲ್ಲಿ ಆರ್‌ಜಿ ನಗರ ಪಿಎಸ್‍ಐ ಅಕ್ಕಮಹಾದೇವಿ ಹಾಗೂ ಮೂವರು ಪೇದೆಗಳಿಗೆ ತೀವ್ರ ಗಾಯಗಳಾಗಿವೆ.
Advertisement
ಗಾಯಾಳುಗಳನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗುಂಡು ತಿಂದ ದರೋಡೆಕೋರರನ್ನ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಕಲಬುರಗಿ ಎಸ್ ಪಿ ಸಎನ್ ಶಶಿಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv