ಬೆಂಗಳೂರು: ಅಪಾಯಕಾರಿ ವ್ಹಿಲಿಂಗ್ (Wheeling) ಹಾಗೂ ಸ್ಟಂಟ್ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದ ಯುವಕನನ್ನು ರಾಜಾಜಿನಗರದ ಸಂಚಾರ ಠಾಣಾ ಪೊಲೀಸರು (Police) ಪತ್ತೆಹಚ್ಚಿ ಹಿಡಿದಿದ್ದಾರೆ.
ನಡುರಸ್ತೆಯಲ್ಲಿ ಯುವಕ ಅತಿವೇಗವಾಗಿ ಸ್ಕೂಟರ್ ಚಲಾಯಿಸಿ, ವ್ಹಿಲಿಂಗ್ ಮಾಡುತ್ತಿದ್ದ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇತ್ತೀಚೆಗೆ ಯುವಕ ವ್ಹಿಲಿಂಗ್ ಮಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಸಾವು – ಲಿವ್ ಇನ್‌ನಲ್ಲಿದ್ದ ತಂದೆ, ತಾಯಿ ಮೇಲೆ ಶಂಕೆ
ಕೊನೆಗೂ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಾಹನವನ್ನು ಜಪ್ತಿ ಮಾಡಿ ಆತನಿಗೆ ದಂಡ ವಿಧಿಸಲಾಗಿದೆ. ಅಲ್ಲದೇ ಆತನ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಬೆದರಿಕೆ – ಇಂಡಿಗೋ ವಿಮಾನದ ಶೌಚಾಲಯದಲ್ಲಿ ಚೀಟಿ ಪತ್ತೆ
