Connect with us

Latest

ದಾಖಲೆಯಿಲ್ಲದ ಬರೋಬ್ಬರಿ 3.75 ಕೋಟಿ ರೂ. ವಶ- ನಾಲ್ವರ ಬಂಧನ

Published

on

ಹೈದರಾಬಾದ್:  ಪೊಲೀಸರು ಹವಾಲಾ ದಂಧೆಯನ್ನು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬರೋಬ್ಬರಿ 3.75 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಈಶ್ವರ್ ದಿಲೀಪ್ ಸೋಲಂಕಿ(29), ಹರೀಶ್ ಭಾಯ್ ಪಟೇಲ್(35), ಅಜಿತ್ ಸಿಂಗ್ (34) ಹಾಗೂ ರಾಥೋಡ್ ನಾನಕ್ ಸಿಂಗ್ ನಾತುಬಾ(42) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರು ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಾಲ್ವರನ್ನು ಬಂಧಿಸಿ, ಹಣ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ತನಿಖೆ ನಡೆಸಿದಾಗ ಮುಂಬೈ ಮೂಲಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕಂಪನಿಯ ಮಾಲೀಕನನ್ನು ಅಹಮ್ಮದಾಬಾದ್ ಮೂಲದವರು ಎಂದು ಗುರುತಿಸಲಾಗಿದೆ. ಅವರು ಹೈದರಾಬಾದ್ ನಲ್ಲಿ ಬ್ರ್ಯಾಂಚ್ ಆಫೀಸ್ ಹೊಂದಿದ್ದು, ಹಣವನ್ನು ಮಹಾರಾಷ್ಟ್ರದ ಸೋಲ್ಹಾಪುರಕ್ಕೆ ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಸದ್ಯ ವಶಕ್ಕೆ ಪಡೆದುಕೊಂಡ 3,75,30,000 ರೂ. ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *