BellaryDistrictsKarnatakaLatest

ಬರೋಬ್ಬರಿ 3,200 ಕೆ.ಜಿಗೂ ಅಧಿಕ ಗಾಂಜಾ ಬೆಳೆ ಪತ್ತೆ..!

ಬಳ್ಳಾರಿ: ಗಣಿನಾಡು ಬಳ್ಳಾರಿ ಅದಿರು ಗಣಿಗಾರಿಕೆಗೆ ಫೇಮಸ್ಸು. ಆದರೆ ಗಣಿಗಾರಿಕೆಗೆ ಸ್ಥಗಿತವಾದ ನಂತರ ಇದೀಗ ಗಾಂಜಾಗೆ ಫೇಮಸ್ ಆಗಿದೆ. ಒಂದಲ್ಲ ಎಡರಲ್ಲ ಬರೋಬ್ಬರಿ 3,200 ಸಾವಿರ ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾ ಬೆಳೆಯನ್ನ ಸಂಡೂರು ಪೊಲೀಸರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಗಾಂಜಾ ಬೆಳೆಯನ್ನ ಹಿಂದೆ ನಕಲಿ ಚಿನ್ನ ಮಾರಾಟ ಮಾಡಿ ವಂಚಿಸುತ್ತಿದ್ದ ತಂಡ ಬೆಳೆದು ಮಾರಾಟಕ್ಕೆ ಮುಂದಾಗಿತ್ತು ಅನ್ನೋದು ಇದೀಗ ಬಯಲಾಗಿದೆ. ಸಂಡೂರಿನ ತಾರಾನಗರದ ಬಳಿ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆಯಿದ್ದ ಅಪಾರ ಪ್ರಮಾಣದ ಗಾಂಜಾ ಬೆಳೆಯನ್ನ ಸಿಪಿಐ ಘೋಪಡೆ ನೇತೃತ್ವದ ತಂಡ ಜಪ್ತಿ ಮಾಡಿ ವಶಪಡಿಸಿಕೊಂಡಿದೆ.

ಈ ಗಾಂಜಾ ಬೆಳೆ ಬೆಳೆಯುತ್ತಿದ್ದ ಕೊರಚರಹಟ್ಟಿಯ ರುದ್ರೇಶ್, ಎಂಪಿಎಂಸಿಯ ಮಾಜಿ ಸದಸ್ಯ ಹಂಪಣ್ಣ ಹಾಗೂ ಗಂಗಾಧರನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಗಾಂಜಾ ಬೆಳೆಯನ್ನ ಕೆ.ಜಿಗೆ ಸಾವಿರ ರೂಪಾಯಿಯಂತೆ ಹಸಿಯಾಗಿಯೇ ಮಾರಾಟ ಮಾಡಲಾಗುತ್ತಿತ್ತು.

ಕಳೆದೆರಡು ದಿನಗಳಿಂದ ಭರ್ಜರಿ ಕಾರ್ಯಾಚರಣೆ ನಡೆಸಿದ ಸಂಡೂರು ಪೊಲೀಸರು ಎಸ್.ಪಿ ಅರುಣ ರಂಗರಾಜನ್ ನೇತೃತ್ವದಲ್ಲಿ ಗಾಂಜಾ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button