ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದೊಂದಿಗೆ ತ್ರಿವರ್ಣಧ್ವಜ ಒಪ್ಪಂದ ಮಾಡಿಕೊಂಡಿದ್ದಾರೆ. ಚೀನಾದೊಂದಿಗೆ ಒಪ್ಪಂದ ಮಾಡೊಕೊಂಡಿರುವ ಪ್ರಧಾನಿ ಹೇಗೆ ಅದರ ನುಸುಳುವಿಕೆ ತಿಳಿಯುತ್ತದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು
Advertisement
Advertisement
ದೇಶದ ಇಂಚಿಂಚನ್ನೂ ರಕ್ಷಿಸಲು ಹೋರಾಡುವವನೇ ನಿಜವಾದ ದೇಶಭಕ್ತ. ಪ್ರಧಾನಿ ಹಾಗೇ ಮಾಡುತ್ತಿಲ್ಲ. ಚೀನಾ ನಮ್ಮ ದೇಶದ ಗಡಿಯನ್ನು ಆಕ್ರಮಿಸಿಕೊಳ್ಳಲು ಹರಸಾಹಸ ಮಾಡಿದೆ. ಆದರೆ ಮೋದಿ ಎಂಟು ವರ್ಷಗಳ ಕಾಲ ಚೀನಾದ ಮುಂದೆ ತಲೆಬಾಗಿದ್ದಾರೆ ಇದನ್ನು ಕಾಂಗ್ರೆಸ್ ಪ್ರಶ್ನಿಸಿದರೂ ಅವರಿಗೆ ಲೆಕ್ಕಿಕ್ಕಿಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೆ ಪಾಕ್ ಸಂಘಟನೆಗಳಿಂದ ಸುಪಾರಿ ಪಡೆದಿದ್ದ ಉಗ್ರ ಅರೆಸ್ಟ್
Advertisement
ಕೇಂದ್ರವು ಇತ್ತೀಚೆಗೆ ಭಾರತದ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿದ್ದು, ಪಾಲಿಯೆಸ್ಟರ್ ಹಾಗೂ ಇತರ ಯಂತ್ರ-ನಿರ್ಮಿತ ಬಟ್ಟೆಯಿಂದ ತ್ರಿವರ್ಣ ಧ್ವಜವನ್ನು ತಯಾರಿಸಲು ಅವಕಾಶ ನೀಡಿತು. ಇದು ಚೀನಾದಂತಹ ದೇಶಗಳಿಗೆ ಲಾಭದಾಯಕವಾಗಲಿದೆ. ರಾಷ್ಟ್ರಧ್ವಜ ತಯಾರಿಕೆಗೆ ಚೀನಾದಿಂದ ಆಮದು ಮಾಡಿಕೊಂಡ ಪಾಲಿಯೆಸ್ಟರ್ ಅನ್ನು ನಾವೇಕೆ ಆಶ್ರಯಿಸಬೇಕಾಯಿತು? ಚೀನಾದಿಂದ ಭಾರತದ ಆಮದು ಏಕೆ ಹೆಚ್ಚುತ್ತಿದೆ? ಎಲ್ಲದಕ್ಕೂ ಪ್ರಧಾನಿ ಅವರೇ ಉತ್ತರ ಹೇಳಬೇಕಿದೆ ಎಂದು ಕಿಡಿ ಕಾರಿದ್ದಾರೆ.