Thursday, 14th November 2019

Recent News

ಬೆಂಗ್ಳೂರಿಗರೇ ಎಚ್ಚರ- ಫ್ಲ್ಯಾಟ್ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ಓದಿ

ಬೆಂಗಳೂರು: ನಗರದಲ್ಲಿ ಯಾರ್ಯಾರು ಪ್ಲಾಟ್ ತೆಗೆದುಕೊಂಡಿದ್ದಾರೋ ಅವರೆಲ್ಲ ಈ ಸ್ಟೋರಿ ನೋಡಲೇಬೇಕು. ಯಾಕಂದ್ರೆ ಬರೋ ವರ್ಷದಿಂದ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಜಲಮಂಡಳಿಯಿಂದ ನೀಡುತ್ತಿರೋ ನೀರಿಗೆ ಬ್ರೇಕ್ ಬೀಳಲಿದೆ.

ಇದೇ ಜನವರಿಯ ಒಳಗಡೆ 50 ಫ್ಲ್ಯಾಟ್‍ಗಳಿಗಿಂತ ಹೆಚ್ಚು ಇರೋ ಅಪಾರ್ಟ್‍ಮೆಂಟ್‍ಗಳು ಕಡ್ಡಾಯವಾಗಿ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಕೊಳ್ಳಲೇಬೇಕು ಅಂತ ನೋಟಿಸ್ ನೀಡಿದೆ. ಈಗಾಗಲೇ ಎಲ್ಲಾ ಅಪಾರ್ಟ್‍ಮೆಂಟ್‍ಗಳಿಗು ನೋಟಿಸ್ ರವಾನಿಸರೋ ಜಲಮಂಡಳಿ ಆಗಲೇ ಕೆಲವೊಂದು ಅಪಾರ್ಟ್‍ಮೆಂಟ್‍ಗಳಿಗೆ ದಂಡವನ್ನೂ ವಿಧಿಸಿದೆ.

ಜಲಮಂಡಳಿಯ ಈ ನಿರ್ಧಾರದಿಂದ ತಿರುಗಿಬಿದ್ದಿರೋ ಅಪಾರ್ಟ್‍ಮೆಂಟ್ ಮಾಲೀಕರು ಇದೀಗ ಹೋರಾಟದ ಹಾದಿ ತುಳಿದಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಜಲಮಂಡಳಿಯ ವಿರುದ್ಧ ಬೃಹತ್ ಮಾನವ ಸರಪಳಿ ನಿರ್ಮಿಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಹಾಗಾದ್ರೆ ಜಲಮಂಡಳಿ ನೀಡಿರೋ ನೋಟಿಸ್‍ನಲ್ಲಿ ಏನಿದೆ ಅಂತಾ ನೋಡೋದಾದ್ರೆ:

* 50 ಕ್ಕಿಂತ ಹೆಚ್ಚಿರುವ ಪ್ಲ್ಯಾಟ್‍ಗಳ ಅಪಾರ್ಟ್‍ಮೆಂಟ್‍ಗಳು ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳಬೇಕು
* ಡಿಸೆಂಬರ್ ಒಳಗಡೆ ಅಳವಡಿಸಿಕೋಳ್ಳಲೇಬೇಕು
* ಅಳವಡಿಸದೇ ಹೋದ್ರೆ ಫೈನ್
* ಡಿಸೆಂಬರ್ ನಂತರ ಮೊದಲ ಬಿಲ್‍ನಲ್ಲಿ ಶೇ 25 ಕ್ಕಿಂತ ಹೆಚ್ಚು ಕಟ್ಟಬೇಕು
* 3 ತಿಂಗಳ ನಂತರ ಶೇಕಡಾ 50 ಕ್ಕಿಂತ ಹೆಚ್ಚು ಬಿಲ್ ಮೊತ್ತದಲ್ಲಿ ದಂಡ ಕಟ್ಟಬೇಕು
* 6 ತಿಂಗಳ ನಂತರ ನೀರಿನ ಸಂಪರ್ಕ ಕಡಿತ

 

Leave a Reply

Your email address will not be published. Required fields are marked *